March 20, 2026

ಬಂಟ್ವಾಳ: ಅಕ್ರಮ ಮದ್ಯ ದಾಸ್ತಾನು ಸ್ಥಳಕ್ಕೆ ಗ್ರಾಮಾಂತರ ಪೊಲೀಸರ ದಾಳಿ

0
images-73.jpeg

ಬಂಟ್ವಾಳ: ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟ ಸ್ಥಳಕ್ಕೆ ಬಂಟ್ವಾಳ ಪೊಲೀಸರು ದಾಳಿ ನಡೆಸಿ ಸುಮಾರು 33,510 ರೂ.ಮೌಲ್ಯದ ಮದ್ಯ ವಶಪಡಿಸಿಕೊಂಡ ಘಟನೆ ಮೇರಮಜಲು ಗ್ರಾಮದ ತೇವುಕಾಡುನಲ್ಲಿ ನಡೆದಿದೆ.

ಬಂಟ್ವಾಳ ಗ್ರಾಮಾಂತರ ಠಾಣಾ ಸಬ್‌ಇನ್ಸ್ಪೆಕ್ಟರ್ ಪ್ರಸನ್ನ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದು, ದಾಳಿಯ ವೇಳೆ ಮನೆಯಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ. ಮನೆಯಂಗಳದಲ್ಲಿ ಆರೋಪಿ ನವೀನ್ ಡಿಸೋಜನನ್ನು ವಿಚಾರಿಸಿದಾಗ ಅಕ್ರಮ ಮದ್ಯ ಮಾರಾಟದ ಕುರಿತು ಒಪ್ಪಿಕೊಂಡಿದ್ದಾನೆ.

ಮನೆಯ ಸಮೀಪದ ಕೋಳಿ ಶೆಡ್‌ನಲ್ಲಿ 26,670 ರೂ. ಮೌಲ್ಯದ ೮ ರಟ್ಟಿನ ಬಾಕ್ಸಿನಲ್ಲಿ 90 ಎಂಎಲ್ ಮದ್ಯ ತುಂಬಿದ 762 ಸ್ಯಾಚೆಟ್‌ಗಳು, 6,840 ರೂ.ಮೌಲ್ಯದ 3 ರಟ್ಟಿನ ಬಾಕ್ಸಿನಲ್ಲಿ 500 ಎಂಎಲ್ ಮದ್ಯ ತುಂಬಿದ ಒಟ್ಟು 72 ಟಿನ್‌ಗಳು ಪತ್ತೆಯಾಗಿವೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!