February 3, 2026

ಕಟ್ಟಡ ಕುಸಿತ: ನಾಲ್ಕು ವರ್ಷದ ಮಗು ಸೇರಿದಂತೆ ಮೂವರು ಮೃತ್ಯು, ಇನ್ನುಳಿದವರು ಸಿಲುಕಿಕೊಂಡಿರುವ ಶಂಕೆ

0
image_editor_output_image-509917458-1665386747710.jpg

ನವದೆಹಲಿ: ಕಟ್ಟಡವೊಂದು ಕುಸಿದು ನಾಲ್ಕು ವರ್ಷದ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದು, ನಾಲ್ವರು ಸಿಲುಕಿಕೊಂಡಿರುವ ಘಟನೆ ದಿಲ್ಲಿಯ ಲಾಹೋರಿ ಗೇಟ್‌ನಲ್ಲಿ ನಡೆದಿದೆ.

ದಿಲ್ಲಿಯಲ್ಲಿ ಶನಿವಾರ ಮಧ್ಯಾಹ್ನದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ವಿಶೇಷವಾಗಿ ಫ್ಲೈಓವರ್‌ಗಳ ಕೆಳಗೆ ಜಲಾವೃತವಾಗಿರುವ ರಸ್ತೆಗಳ ಬಗ್ಗೆ ಜಾಗರೂಕರಾಗಿರಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇನ್ನು ಮಳೆಯ ರಭಸಕ್ಕೆ ಕಟ್ಟಡ ಕುಸಿತಗೊಂಡಿದ್ದು, ಅವಶೇಷಗಳಡಿ ಸಿಲುಕಿ ನಾಲ್ಕು ವರ್ಷದ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದು ಮತ್ತೆ ನಾಲ್ವರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!