ಚಲಿಸುತ್ತಿದ್ದ ಕಾರಿನಲ್ಲೇ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ
ಸುಲ್ತಾನ್ಪುರ: ಚಲಿಸುತ್ತಿದ್ದ ಕಾರಿನಲ್ಲೇ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಬಳಿಕ ಇಲ್ಲಿನ ಜೈಸಿಂಗ್ಪುರ ಪ್ರದೇಶದಲ್ಲಿ ಕಾಲುವೆಯೊಂದರ ಬಳಿ ಎಸೆದಿರುವ ಘಟನೆ ಭಾನುವಾರ ನಡೆದಿದೆ.
ಶುಕ್ರವಾರ ಸಂಜೆ 23 ವರ್ಷದ ಬಿಟೆಕ್ ವಿದ್ಯಾರ್ಥಿನಿ ಮನೆಗೆ ಹಿಂತಿರುಗಲು ಎಸ್ಯುವಿ ಕಾರೊಂದಕ್ಕೆ ಲಿಫ್ಟ್ ಕೇಳಿದ್ದಾರೆ. ಲಿಫ್ಟ್ ಕೊಡುವೆ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ವಿದ್ಯಾರ್ಥಿನಿ ಮೇಲೆ ಕಾರಿನೊಳಗೆ ಅತ್ಯಾಚಾರ ಎಸಗಿ, ಕಾಲುವೆಯ ಬಳಿ ಎಸೆದು ಪರಾರಿಯಾಗಿದ್ದಾನೆ. ನಂತರ ಯುವತಿ ಮನೆಗೆ ಬಂದು ಕಾರಿನಲ್ಲಿ ನಡೆದ ಘಟನೆಯ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದ್ದಾಳೆ.
ಈ ಕುರಿತು ದೂರು ಬಂದಿದ್ದು, ತನಿಖೆ ಮುಂದುವರಿದಿದೆ. ಪ್ರಾಥಮಿಕ ತನಿಖೆಯ ನಂತರ ಎಫ್ಐಆರ್ ದಾಖಲಿಸಲಾಗುವುದು ಎಂದು ಜೈಸಿಂಗ್ಪುರ ವೃತ್ತಾಧಿಕಾರಿ ಪ್ರಶಾಂತ್ ಸಿಂಗ್ ಹೇಳಿದ್ದಾರೆ.