March 23, 2026

ಬೆಳ್ತಂಗಡಿ: ಆಕಸ್ಮಿಕವಾಗಿ ಕೆರೆಗೆ ಜಾರಿಬಿದ್ದು ಯುವತಿ ಮೃತ್ಯು

0
image_editor_output_image-1659622069-1665291980505

ಬೆಳ್ತಂಗಡಿ: ನಾರಾವಿಯ ಯುವತಿಯೊರ್ವರು ಆಕಸ್ಮಿಕವಾಗಿ ಕೆರೆಗೆ ಜಾರಿಬಿದ್ದು ಸಾವನ್ನಪ್ಪಿದ ದಾರುಣ ಘಟನೆ ನಾರಾವಿ ಗ್ರಾ.ಪಂ ವ್ಯಾಪ್ತಿಯಲ್ಲಿ  ನಡೆದಿದೆ.

ಮೃತ ಯುವತಿಯನ್ನು ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಸಿಕಟ್ಟೆ ಗುಮಡ ಬಂಗರ ಮನೆಯ, ನಾರಾವಿ ಗ್ರಾ.ಪಂ ಸದಸ್ಯ ರಾಜವರ್ಮ ಜೈನ್ ಅವರ ಪುತ್ರಿ ಸುರಕ್ಷಾ ಜೈನ್ (23) ಎಂದು ಗುರುತಿಸಲಾಗಿದೆ.

ಈ ಘಟನೆಯಿಂದ ಮೃತ ಯುವತಿಯ ತಂದೆ ರಾಜವರ್ಮ ಜೈನ್ ಕುಸಿದ್ದು ಬಿದ್ದು ತೀವ್ರಪ್ರಮಾಣದ ಗಾಯಗಳಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಸ್ಥಳಕ್ಕೆ ವೇಣೂರು ಪೋಲಿಸ್ ಠಾಣೆಯ ಉಪನಿರೀಕ್ಷಕಿ ಸೌಮ್ಯ ಜೆ ಭೇಟಿ ನೀಡಿ ಕೇಸು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!