ಅಡ್ಯನಡ್ಕ: ಹಿಮಾಯತುಲ್ ಇಸ್ಲಾಂ ಮದ್ರಸದ ನೂತನ ಕಟ್ಟಡ ಉದ್ಘಾಟನೆ
ವಿಟ್ಲ: ಸಮೀಪದ ಅಡ್ಯನಡ್ಕ ಹಿಮಾಯತುಲ್ ಇಸ್ಲಾಂ ಮದ್ರಸ ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು.
ಸಮಸ್ತದ ಅಧ್ಯಕ್ಷ ಸಯ್ಯದುಲ್ ಉಲಮ ಜಿಫ್ರಿ ಮುತ್ತುಕೋಯ ತಂಙಳ್ ಅವರು ನೂತನ ಮದರಸ ಕಟ್ಟಡ ಮತ್ತು ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ದುವಾಃ ಆಶೀರ್ವಚನ ನೀಡಿ, ಮಾತನಾಡಿದ ಅವರು ಮದ್ರಸ ನಿರ್ಮಾಣ ಕಾರ್ಯ ಮಹತ್ವದ ಕಾರ್ಯವಾಗಿದ್ದು, ಮದರಸ, ಮಸೀದಿ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದವರ ಮೇಲೆ ದೇವರ ಅನುಗ್ರಹ ಸದಾ ಇರುತ್ತದೆ ಎಂದರು.
ಸಯ್ಯದ್ ಮೀರ್ ಝಾಹಿದ್ ತಂಙಳ್ ಮಂಜೇಶ್ವರ ದುವಾಃ ನೇರವೇರಿಸಿದರು. ಅಡ್ಯನಡ್ಕ ರಹ್ಮಾನಿಯ ಜುಮಾ ಮಸೀದಿಯ ಮುದರ್ರಿಸ್ ಎಸ್ ಎಚ್ ಹೈದರ್ ದಾರಿಮಿ, ಆದೂರು ಮುದರ್ರಿಸ್ ಹಾಜಿ ಅಬ್ದುಲ್ ಹಮೀದ್ ಫೈಝಿ, ಅಡ್ಯನಡ್ಕ ಮಾಜಿ ಮುದರ್ರಿಸ್ ಅಬ್ದುಲ್ ರಝಾಕ್ ಮಿಸ್‍ಬಾಯಿ, ಮರಕ್ಕಿಣಿ ಮುದರ್ರಿಸ್ ನೌಫಲ್ ಹುಸೈನ್ ಫೈಝಿ, ಮುಹಮ್ಮದ್ ದಾರಿಮಿ ಮುಫತ್ತಿಸ್, ಸದರ್ ಉಸ್ತಾದ್ ಗಳಾದ ಶಫೀಕ್ ಫೈಝಿ, ಮದ್ರಾಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಶೇರಿಫ್ ಮೂಸಾ ಕುದ್ದುಪದವು, ರಹ್ಮಾನಿಯ ಜುಮಾ ಮಸ್ಜಿದ್ ಅಧ್ಯಕ್ಷ ಶೇರಿಫ್ ಎ ಪಿ, ಕಾರ್ಯಾದರ್ಶಿ ಅಬ್ದುಲ್ ರಝಾಕ್ ನೆಗಳಗುಳಿ, ಸ್ವಾಗತ ಸಮಿತಿ ಚೇಯರ್ ಮ್ಯಾನ್ ಅಬ್ದುಲ್ ಖಾದರ್, ಸ್ವಾಗತ ಸಮಿತಿ ಕನ್ವೀನರ್ ಶಹಬಾನ್ ಮೈದಾನಿ ಉಪಸ್ಥಿತರಿದ್ದರು.




