ವಿಟ್ಲ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸುರಿಬೈಲ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್ ಎಂ ಅಬೂಬಕ್ಕರ್ ನಿಧನ
ವಿಟ್ಲ: ಕೊಳ್ನಾಡು ಗ್ರಾಮದ ಸುರಿಬೈಲು ನಿವಾಸಿ ಎಸ್.ಎಂ ಅಬೂಬಕ್ಕರ್(60) ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಸುರಿಬೈಲ್ ಸರಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದರು. ಶಾಲೆಯಲ್ಲಿ ಸುತ್ತಲೂ ಹೂದೋಟ, ತರಕಾರಿ, ಅಡಿಕೆ ಮರ ನೆಟ್ಟು ಅದರ ಪೋಷಣೆ ಮಾಡುತ್ತಿದ್ದರು. ಇವರ ಪರಿಶ್ರಮದಿಂದ ಈ ಶಾಲೆಗೆ ರಾಷ್ಟ್ರೀಯ ಪರಿಸರ ಪ್ರಶಸ್ತಿ ಸಹಿತ ಮೊದಲಾದ ಗೌರವಗಳು ದೊರಕಿದೆ. ಇವರ ಗಣನೀಯ ಸೇವೆಯನ್ನು ಗೌರವಿಸಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದರು.ರಾಜ್ಯ ಎಸ್ ಡಿ ಎಂ ಸಿ ಸಮಿತಿಯಲ್ಲಿ ಪದಾಧಿಕಾರಿಯಾಗಿ, ಸುರಿಬೈಲು ಮಸೀದಿಯ ಆಡಳಿತ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಕೊಳ್ನಾಡು ಗ್ರಾಮ ಪಂಚಾಯತ್ ನಲ್ಲಿ ಎರಡು ಅವಧಿಯಲ್ಲಿ ಸದಸ್ಯರಾಗಿದ್ದರು. ಕೊಡುಗೈ ದಾನಿಯಾಗಿದ್ದರು. ಮೃತರಿಗೆ ಪತ್ನಿ ಇದ್ದಾರೆ.
ಮಾಜಿ ಸಚಿವ ಬಿ ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮಹಮ್ಮದ್, ಕಾಂಗ್ರೆಸ್ ಪಂಚಾಯತ್ ರಾಜ್ ಸಮಿತಿಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ ಮೊದಲಾದವರು ಭೇಟಿ ನೀಡಿ, ಅಂತಿಮ ದರ್ಶನ ಪಡೆದರು.



