February 3, 2026

ಎಲ್‍ಇಡಿ ಟಿವಿ ಸ್ಫೋಟ: ಬಾಲಕ ಮೃತ್ಯು, ಮೂವರು ಗಾಯ

0
image_editor_output_image1532091268-1664948612464.jpg

ಗಾಝಿಯಾಬಾದ್: ಎಲ್‍ಇಡಿ ಟಿವಿ ಸ್ಫೋಟಗೊಂಡು ಹದಿನಾರು ವರ್ಷದ ಬಾಲಕನೊಬ್ಬ ಮೃತಪಟ್ಟು ಮೂವರು ಗಾಯಗೊಂಡ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್‍ನಲ್ಲಿ ನಡೆದಿದೆ.

ಓಮೇಂದ್ರ ಸಾವನ್ನಪ್ಪಿದ ದುರ್ದೈವಿ. ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಏಕಾಏಕಿ ಸ್ಫೋಟಗೊಂಡಿದ್ದು ಬಾಲಕ ಗಂಭೀರ ಗಾಯಗೊಂಡು ಸಾವನ್ನಪ್ಪಿದರೆ ಬಾಲಕನ ತಾಯಿ, ಅತ್ತಿಗೆ ಹಾಗೂ ಬಾಲಕನ ಸ್ನೇಹಿತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಸ್ಫೋಟ ಎಷ್ಟು ತೀವ್ರವಾಗಿತ್ತು ಎಂದರೆ ಮನೆಯ ಕಾಂಕ್ರೀಟ್ ಸ್ಲ್ಯಾಬ್ ಹಾಗೂ ಗೋಡೆಯ ಒಂದು ಭಾಗ ಸ್ಫೋಟದ ರಭಸಕ್ಕೆ ಕುಸಿದು ಹೋಗಿದೆ.

ನೆರೆಮನೆಯಲ್ಲಿ ದೊಡ್ಡ ಸದ್ದು ಕೇಳಿ ಸಿಲಿಂಡರ್ ಸ್ಫೋಟ ಗೊಂಡಿರಬೇಕು ಎಂದು ಓಡಿ ಬಂದು ನೋಡುವಷ್ಟರಲ್ಲಿ ಮನೆಯ ಗೋಡೆಗೆ ಅಳವಡಿಸಿದ್ದ ಎಲ್ ಇಡಿ ಟಿವಿ ಸ್ಪೋಟಗೊಂಡಿರುವುದು ಗೊತ್ತಾಗಿದೆ ಎಂದು ನೆರೆಮನೆಯವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!