February 3, 2026

ನ್ಯೂಯಾರ್ಕ್: ‌ಎಂಟು ತಿಂಗಳ ಮಗು ಸಹಿತ ಭಾರತ ಮೂಲದ ನಾಲ್ವರ ಅಪಹರಣ

0
image_editor_output_image1791851816-1664874426763.jpg

ನ್ಯೂಯಾರ್ಕ್: ‌ಎಂಟು ತಿಂಗಳ ಮಗು ಸಹಿತ ಭಾರತ ಮೂಲದ ನಾಲ್ವರನ್ನು ವ್ಯಕ್ತಿಯೋರ್ವ ಅಪಹರಿಸಿದ್ದಾನೆಂದು ತಿಳಿದು ಬಂದಿದೆ.

ಜಸ್ದೀಪ್ ಸಿಂಗ್ (36), ಜಸ್ಲೀನ್ ಕೌರ್ (27), ಅವರ ಎಂಟು ತಿಂಗಳ ಮಗಳು ಅರುಹಿ ಧೇರಿ ಮತ್ತು 39 ವರ್ಷದ ಅಮನ್ ದೀಪ್ ಸಿಂಗ್ ಅಪಹರಣಕ್ಕೊಳಗಾದವರು. ಅಪಹರಣಕಾರ ಶಂಕಿತ ವ್ಯಕ್ತಿ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದು, ಆತ ಶಸ್ತ್ರಸಜ್ಜಿತನಾಗಿದ್ದ ಎಂದಿರುವುದಾಗಿ ವರದಿಯಾಗಿದೆ.

ಅಪಹರಣಕಾರನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ಅಪಹರಣಗೊಂಡ ಸ್ಥಳವು ಅಂಗಡಿ ಮತ್ತು ರೆಸ್ಟೋರೆಂಟ್‌ಗಳಿರುವ ಪ್ರದೇಶವಾಗಿದ್ದು, ಜನಜಂಗುಳಿಯಿತ್ತು ಎಂದು ಅಧಿಕಾರಿಗಳು ತಿಳಿಸಿದ್ದು, ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!