March 20, 2026

ಬ್ರಾಹ್ಮಣ ಸಮುದಾಯ ನನ್ನ ಜೇಬಿನಲ್ಲಿವೆ:
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್‌

0
image_editor_output_image937040331-1636446552499.jpg

ಭೋಪಾಲ್‌: ‘ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳು ನನ್ನ ಜೇಬಿನಲ್ಲಿವೆ’ ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ಮುರಳೀಧರ ರಾವ್‌ ಅವರ ಹೇಳಿಕೆಯು ಸೋಮವಾರ ವಿವಾದ ಸೃಷ್ಟಿಸಿದೆ.

ಮಧ್ಯಪ್ರದೇಶದ ಉಸ್ತುವಾರಿ ರಾವ್ ಅವರ ಹೇಳಿಕೆಯನ್ನು ಕಾಂಗ್ರೆಸ್‌ ಖಂಡಿಸಿದೆ. ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ. ಅದರೆ, ವಿರೋಧ ಪಕ್ಷಗಳು ತಮ್ಮ ಹೇಳಿಕೆಯನ್ನು ತಿರುಚಿವೆ ಎಂದು ರಾವ್‌ ಹೇಳಿದ್ದಾರೆ.

ಭೋಪಾಲ್‌ನಲ್ಲಿರುವ ರಾಜ್ಯ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳತ್ತ ಬಿಜೆಪಿ ಪಕ್ಷ ಮತ್ತು ಸರ್ಕಾರಗಳು ವಿಶೇಷವಾಗಿ ಗಮನಹರಿಸಲಿವೆ. ಆದರೆ, ಅವರನ್ನು ವೋಟ್‌ ಬ್ಯಾಂಕ್‌ ಮಾಡಿಕೊಳ್ಳುವ ಉದ್ದೇಶದಿಂದ ಅಲ್ಲ. ಅವರ ಶಿಕ್ಷಣ’ ಉದ್ಯೋಗ, ಅಭಿವೃದ್ಧಿಗಾಗಿ,’ ಎಂದು ಅವರು ತಿಳಿಸಿದರು.

‘ಬಿಜೆಪಿಯು ಬ್ರಾಹ್ಮಣ–ಬನಿಯಾಗಳ ಪಕ್ಷವೆಂಬ ಮಾತು ವ್ಯಾಪಕವಾಗಿದೆ. ಹೀಗಿರುವಾಗ ನೀವು ‘ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌’ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಮಾಧ್ಯಮಗಳು ರಾವ್‌ ಅವರನ್ನು ಪ್ರಶ್ನೆ ಮಾಡಿದವು.

Leave a Reply

Your email address will not be published. Required fields are marked *

error: Content is protected !!