August 20, 2026

ಉಡುಪಿ: ಕೊಕ್ಕರ್ಣೆ ಸೀತಾನದಿಯಲ್ಲಿ ಗಂಡು ಮಗುವಿನ ಮೃತದೇಹ ಪತ್ತೆ

0
Screenshot_2021-11-09-13-55-30-22_680d03679600f7af0b4c700c6b270fe7.jpg

ಉಡುಪಿ: ಕೊಕ್ಕರ್ಣೆ ಸೀತಾನದಿಯಲ್ಲಿ 1 ದಿನದ ಗಂಡು ಮಗುವಿನ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ.

ಸೀತಾನದಿಯಲ್ಲಿ ಮೃತದೇಹ ತೇಲುತ್ತಿರುವ ಬಗ್ಗೆ ಕೊಕ್ಕರ್ಣೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಜ್ವತ್ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿದಾಗ ಮಗು ಕೇವಲ ಒಂದು ದಿನದಾಗಿದ್ದು, ಮುಖ ಹಾಗೂ ತಲೆಯ ಭಾಗ ಜಲಚರಗಳು ತಿಂದು ಕೊಳೆತ ಸ್ಥಿತಿಯಲ್ಲಿ ಇದ್ದು, ಅಲ್ಲದೇ ಮಗುವಿನ ಹೊಕ್ಕುಳ ಬಳ್ಳಿ ಕೂಡ ಮೃತ ದೇಹದೊಂದಿಗೆ ಇತ್ತು. ಮಗುವಿನ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದಾಗ ಮಗುವಿನ ವಾರಿಸುದಾರರು ಯಾರೂ ಪತ್ತೆಯಾಗಿರುವುದಿಲ್ಲ.

ಘಟನಾ ಸ್ಥಳಕ್ಕೆ ಬ್ರಹ್ಮಾವರ ಎಸ್‌ಐ ಗುರುನಾಥ ಬಿ ಹಾದಿಮನಿ ಮತ್ತು ತಂಡ ಭೇಟಿ ನೀಡಿದೆ. ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!