July 4, 2026

ಹಿಂದೂ ಮಹಾಸಭಾದಿಂದ ಮಹಾತ್ಮಾ ಗಾಂಧಿಗೆ ಅವಮಾನ: ವ್ಯಾಪಕ ಆಕ್ರೋಶ

0
image_editor_output_image-1410906674-1664784465788.jpg

ಕೋಲ್ಕತ್ತಾ : ಅಖಿಲ ಭಾರತ ಹಿಂದೂ ಮಹಾಸಭಾ ಆಯೋಜಿಸಿದ್ದ ದುರ್ಗಾ ಪೂಜೆಯಲ್ಲಿ ಮಹಾತ್ಮಾ ಗಾಂಧಿಯನ್ನು ಮಹಿಷಾಸುರನಂತೆ ಬಿಬಿಸಿರುವುದು ಭಾರಿ ವಿರೋದಕ್ಕೆ ಕಾರಣವಾಗಿದ್ದು ಕೇಂದ್ರ ಗೃಹ ಸಚಿವಾಲಯದ ಸೂಚನೆ ಮತ್ತು ಪಶ್ಚಿಮ ಬಂಗಾಳದ ಪೊಲೀಸರ ನಿರ್ದೇಶನದ ಮೇರೆಗೆ ಮಹಾತ್ಮಾ ಗಾಂಧಿಯ ಗೊಂಬೆಯನ್ನು ಅಖಿಲ ಭಾರತ ಹಿಂದು ಮಹಾಸಭಾ ತೆಗೆದು ಹಾಕಿದ ಪ್ರಸಂಗ ನಡೆದಿದೆ.

ದೇಶದೆಲ್ಲೆಡೆ ನವರಾತ್ರಿಯ ಪರ್ವಕಾಲದಲ್ಲಿ ದುರ್ಗಾ ಪೂಜೆಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಅದರಂತೆ ಕೋಲ್ಕತ್ತಾದ ಅಖಿಲ ಭಾರತ ಹಿಂದೂ ಮಹಾಸಭಾವೂ ದುರ್ಗಾ ಪೂಜೆಯನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಿದೆ.

ಆದರೆ ರವಿವಾರ ನಡೆದ ದುರ್ಗಾ ಪೂಜೆಯಲ್ಲಿ ಮಹಿಷಾಸುರ ಮರ್ದಿನಿಯಂತೆ ಚಿತ್ರಿಸಲಾಗಿತ್ತು. ಅಂದರೆ ದೇವಿ, ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಿದಂತೆ ಗೊಂಬೆಗಳನ್ನು ಜೋಡಿಸಲಾಗಿತ್ತು. ಅದರಂತೆ ದೇವಿಯ ಕಾಲಡಿಯಲ್ಲಿ ಬಿದ್ದ ಮಹಿಷಾಸುರನಾಗಿ ಮಹಾತ್ಮ ಗಾಂಧಿ ಗೊಂಬೆಯನ್ನು ಇಡಲಾಗಿತ್ತು. ಅದನ್ನು ಕಂಡ ಅನೇಕ ಮಂದಿ ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!