ದೇವರು ಶಿವ ಬಲಿ ಕೇಳಿದ್ದಾನೆಂದು 6 ವರ್ಷದ ಬಾಲಕನನ್ನು ಚಾಕುವಿನಿಂದ ಕತ್ತು ಸೀಳಿ ಕೊಲೆ
ನವದೆಹಲಿ: ದೇವರು ಶಿವ ಬಲಿ ಕೇಳಿದ್ದಾನೆಂದು ಗಾಂಜಾ ಸೇವಿಸಿ ಇಬ್ಬರು ಹುಡುಗರು ಆರು ವರ್ಷದ ಬಾಲಕನನ್ನು ಚಾಕುವಿನಿಂದ ಕತ್ತು ಸೀಳಿ ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿಧಿವಿಜ್ಞಾನ ತಜ್ಞರ ತಂಡದೊಂದಿಗೆ ಪರಿಶೀಲನೆ ನಡೆಸಿದರು. ನಂತರ ಕೊಲೆಗೆ ಹುಡುಗರು ಬಳಸಿದ್ದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಲೆಯಾದ ಬಾಲಕನ ಪೋಷಕರಿಗೆ ಮೂವರು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬ ಎರಡು ವರ್ಷದ ಮಗು. ಮತ್ತೊಬ್ಬ ಕೊಲೆಯಾದ ಹುಡುಗನಿಗಿಂತ ಹಿರಿಯವನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.




