March 23, 2026

ಮಳೆಗೆ ಮನೆ ಗೋಡೆ ಕುಸಿತ: ಒಂದೇ ಕುಟುಂಬದ ಮೂವರು ಸಾವು

0
image_editor_output_image-268380276-1664774924236.jpg

ರಾಯಚೂರು: ಜಿಲ್ಲೆಯಾದ್ಯಂತ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮೂವರನ್ನು ಬಲಿ ಪಡೆದಿದೆ. ಮಾನ್ವಿ ತಾಲೂಕಿನ ಕುರಡಿ ಗ್ರಾಮದಲ್ಲಿ ಸತತ ಮಳೆಗೆ ಮನೆ ಗೋಡೆ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ಪರಮೇಶ (45) ,‌ ಪರಮೇಶ್ ಪತ್ನಿ ಜಯಮ್ಮ (39) ಹಾಗೂ ಪರಮೇಶನ ತಮ್ಮನ ಮಗ ನಾಲ್ಕು ವರ್ಷದ ಭರತ್ ಮೃತ ದುರ್ದೈವಿಗಳು. ಮನೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮನೆ ಗೋಡೆ ಕುಸಿದು ಅವಘಡ ನಡೆದಿದೆ.

ಪರಮೇಶ ಹಾಗೂ ಜಯಮ್ಮ ಸ್ಥಳದಲ್ಲೇ ಮೃತಪಟ್ಟರೆ, ಬಾಲಕ ಭರತ್ ಮಾನ್ವಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

Leave a Reply

Your email address will not be published. Required fields are marked *

error: Content is protected !!