ಕೇರಳದ RSS ನಾಯಕರಿಗೆ “ವೈ” ವರ್ಗದ ಭದ್ರತೆ: ಅರೆಸೇನಾ ಪಡೆಗಳ ಕಮಾಂಡೋಗಳ ನಿಯೋಜನೆ
ಕೇರಳ: ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ (ಪಿಎಫ್‌ಐ) ಸಂಭವನೀಯ ಬೆದರಿಕೆಯ ಕುರಿತು ಕೇಂದ್ರ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ ನಂತರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಶನಿವಾರ ಕೇರಳದ ಐವರು ಆರ್‌ಎಸ್‌ಎಸ್ ನಾಯಕರಿಗೆ “ವೈ” ವರ್ಗದ ಭದ್ರತೆಯನ್ನು ನೀಡಿದೆ.
ಕೇಂದ್ರ ಸರ್ಕಾರವು ಪಿಎಫ್ಐ ಸಂಘಟನೆಯನ್ನು ಐದು ವರ್ಷಗಳ ಕಾಲ ಬ್ಯಾನ್ ಮಾಡಿದ ಬಳಿಕ ಕೇರಳದ ಆರ್ ಎಸ್ಎಸ್ ನಾಯಕರ ಮೇಲೆ ಸಂಭವನೀಯ ದಾಳಿಯ ಕುರಿತು ಗೃಹ ಸಚಿವಾಲಯಕ್ಕೆ ಎನ್ಐಎ ಮಾಹಿತಿ ನೀಡಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಎನ್ಐಎ ಮತ್ತು ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಆಧರಿಸಿ ಗೃಹ ಸಚಿವಾಲಯವು ಕೇರಳದ ಐದು ಆರ್ ಎಸ್ಎಸ್ ನಾಯಕರಿಗೆ ವೈ ಕೆಟಗರಿ ಭದ್ರತೆ ನೀಡಲು ನಿರ್ಧರಿಸಿದೆ. ಆರ್‌ಎಸ್‌ಎಸ್ ನಾಯಕರ ಭದ್ರತೆಗೆ ಅರೆಸೇನಾ ಪಡೆಗಳ ಕಮಾಂಡೋಗಳನ್ನು ನಿಯೋಜಿಸಲಾಗುವುದು. ಭದ್ರತೆಯನ್ನು ಒದಗಿಸಲು ಒಟ್ಟು 11 ಸಿಬ್ಬಂದಿಗಳು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ