March 23, 2026

ಸಚಿವೆ ಶೋಭಾ ಕರಂದ್ಲಾಜೆ ಶೋಭಾ ಗೌಡ ಹೆಸರು ಬದಲಾವಣೆ ‌‌ವಿಚಾರ: ಹೆಸರು ಬದಲಾಯಿಸಲು ನನಗೆ ತಲೆ ಕೆಟ್ಟಿಲ್ಲ: ಶೋಭಾ ಕರಂದ್ಲಾಜೆ

0
image_editor_output_image260238535-1664516332854.jpg

ಉಡುಪಿ: ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ದಿಢೀರ್ ಆಗಿ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಚರ್ಚೆಯೊಂದು ಜೋರಾಗಿತ್ತು. ಇದೀಗ ಈ ಸುದ್ದಿಗೆ ಸಚಿವೆ ಸ್ಪಷ್ಟನೆ ನೀಡುವ ಮೂಲಕ ಬ್ರೇಕ್ ಹಾಕಿದ್ದಾರೆ.

ಶೋಭಾ ಕರಂದ್ಲಾಜೆ ಹೆಸರು ಬದಲಿಸುವ ಚರ್ಚೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಯಾರೋ ಹಬ್ಬಿಸಿದ ಸುಳ್ಳು ಸುದ್ದಿ. ನನ್ನ ವಿರುದ್ಧ ಯಾರೋ ಷಡ್ಯಂತ್ರ ಮಾಡುತ್ತಿದ್ದಾರೆ. ರಾಜಕಾರಣಿಗಳನ್ನ ಕೆಲವರು ಜೋಕರ್ಸ್ ಅಂದುಕೊಂಡಿದ್ದಾರೆ ಎಂದು ಗರಂ ಆದರು.

ಮಾಧ್ಯಮ, ಸಾಮಾಜಿಕ, ರಾಜಕೀಯ ವಲಯ ಅಥವಾ ವಿರೋಧ ಪಕ್ಷ ಅಪಪ್ರಚಾರ ನಿಲ್ಲಿಸಬೇಕು. ಈ ರೀತಿ ಮಾಡುವವರಿಗೆ ಇದು ನನ್ನ ವಿನಮ್ರ ವಿನಂತಿ. ಯಾಕೆ ಈ ಚರ್ಚೆ ಶುರುವಾಯಿತು ಗೊತ್ತಿಲ್ಲ. ಹೆಸರು ಬದಲಾಯಿಸಲು ನನಗೆ ತಲೆ ಕೆಟ್ಟಿದ್ಯಾ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!