ಮುಖೇಶ್ ಅಂಬಾನಿಗೆ Z+ ಭದ್ರತೆ: ಕೇಂದ್ರ ಸರಕಾರ ಶಿಫಾರಸು
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಝಡ್ ಪ್ಲಸ್ ಭದ್ರತೆಯನ್ನು (Z+ category) ನೀಡಿದೆ.
ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಉದ್ಯಮಿ ಅಂಬಾನಿಗೆ ಭದ್ರತೆಯನ್ನು (Security) ಹೆಚ್ಚಿಸುವ ಕುರಿತು ಕೇಂದ್ರ ನಿರ್ಧಾರವನ್ನು ತೆಗೆದುಕೊಂಡಿದೆ. ಅಂಬಾನಿಗೆ ಬರುತ್ತಿರುವ ಬೆದರಿಕೆಗಳ ಕುರಿತಂತೆ ಕೇಂದ್ರ ಗುಪ್ತಚರ ಸಂಸ್ಥೆ ಹಾಗೂ ಭದ್ರತಾ ಸಂಸ್ಥೆಗಳ ಮಾಹಿತಿ ಆಧರಿಸಿ ಕೇಂದ್ರ ಗೃಹ ಸಚಿವಾಲಯವು ಈ ಶಿಫಾರಸು ಮಾಡಿದೆ.
ಕಳೆದ ವರ್ಷ ಮುಖೇಶ್ ಅಂಬಾನಿ ಅವರ ಮುಂಬೈಯಲ್ಲಿರುವ ಆಂಟಿಲಿಯಾ ನಿವಾಸದ ಹೊರಗೆ 20 ಸ್ಫೋಟಕ ಜಿಲೆಟಿನ್ ಸ್ಟಿಕ್‌ಗಳು ಹಾಗೂ ಬೆದರಿಕೆ ಪತ್ರವಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಅದಾದ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಅದಾದ ಬಳಿಕ ಇದೀಗ ಮತ್ತೆ ಅಂಬಾನಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಇದೀಗ ಮತ್ತೇ ಭದ್ರತೆಯನ್ನು ಹೆಚ್ಚಿಸಿದೆ.