April 3, 2025

ನಾಲ್ವರು ಮುಸ್ಲಿಂ ಯುವಕರ ಮೇಲೆ ಭಜರಂಗದಳದ ಕಾರ್ಯಕರ್ತರು ಹಲ್ಲೆ: ವಿಡಿಯೋ ವೈರಲ್

0

ಗಾಂಧೀನಗರ: ಗರ್ಬಾ ಸ್ಥಳದಲ್ಲಿ ನಾಲ್ವರು ಮುಸ್ಲಿಂ ಯುವಕರ ಮೇಲೆ ಭಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನವರಾತ್ರಿ ಹಿನ್ನೆಲೆಯಲ್ಲಿ ಅಹಮದಾಬಾದ್ ನ ಸಿಂಧು ಭವನ ರಸ್ತೆಯ ಗರ್ಭಾ ಸ್ಥಳದಲ್ಲಿ ಇತರ ಧರ್ಮದ ಜನರು ಬರದಂತೆ ಭಜರಂಗದಳದ ಸ್ವಯಂಸೇವಕರು ತಪಾಸಣೆ ನಡೆಸಿದ್ದರು. ಈ ವೇಳೆ ಮುಸ್ಲಿಂ ಯುವಕರು ಅಲ್ಲಿ ಕಾಣಿಸಿಕೊಂಡಿದ್ದರಿಂದ ಅವರ ಮೇಲೆ ಹಲ್ಲೆ ನಡೆಸಲಾಗಿದೆ. 

ಲವ್ ಜಿಹಾದ್ ತಡೆಯಲು ನಮ್ಮ ಸ್ವಯಂಸೇವಕರು ಅವರನ್ನು ಹಿಡಿದು ಥಳಿಸಿದ್ದಾರೆ ಎಂದು ಗುಜರಾತ್ ವಿಹೆಚ್ ವಿ ವಕ್ತಾರ ಹಿತೇಂದ್ರ ಸಿನ್ಹಾ ರಜಪೂತ್ ಅವರು ಹಲ್ಲೆಯನ್ನು ಸಮರ್ಥಿಸಿಕೊಂಡಿದ್ದಾರೆ. 

 

 

Leave a Reply

Your email address will not be published. Required fields are marked *

error: Content is protected !!