ಆಕಾಶ್ ಬೈಜೂ’ಸ್ ಸಂಸ್ಥೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಉಚಿತ ನಾಸಾ ಪ್ರವಾಸ
ಮಂಗಳೂರು: ಆಕಾಶ್ ಬೈಜೂಸ್ ಕೋಚಿಂಗ್ ಸಂಸ್ಥೆಯು ಈ ಬಾರಿ ನಡೆಸುವ ‘ಆಂಥೆ’ (ಆಕಾಶ್ ಬೈಜೂಸ್ ನ್ಯಾಷನಲ್ ಟ್ಯಾಲೆಂಟ್ ಹಂಟ್) ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಎರಡು ಸಾವಿರ ವಿದ್ಯಾರ್ಥಿನಿಯರಿಗೆ ಉಚಿತವಾಗಿ ನೀಟ್, ಜೆಇಇ ಕೋಚಿಂಗ್ ನೀಡುವ ಯೋಜನೆ ಹಾಕಿದೆ.
ಈ ವಿಚಾರವಾಗಿ ಮಂಗಳೂರಿನ ಆಕಾಶ್ ಬೈಜೂಸ್ ಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಉಪ ನಿರ್ದೇಶಕ ಶ್ಯಾಂ ಪ್ರಸಾದ್, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ನವೆಂಬರ್ ಐದರಿಂದ 13ರವರೆಗೆ ಈ ಪರೀಕ್ಷೆ ರಾಷ್ಟ್ರಾದ್ಯಂತ ಆನ್‌ಲೈನ್ ನಲ್ಲಿ ನಡೆಯಲಿದೆ.
ಸುಮಾರು 15 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಜೊತೆಗೆ ಐದು ವಿದ್ಯಾರ್ಥಿಗಳಿಗೆ ಪೋಷಕರೊಂದಿಗೆ ನಾಸಾಕೆ ಉಚಿತ ಪ್ರವಾಸದ ಯೋಜನೆಯನ್ನು ಹಾಕಿದೆ.
ಇದೇ ವೇಳೆ ಆಂಥೆ ಪರೀಕ್ಷೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಂಸ್ಥೆಯ ಪ್ರಮುಖರಾದ ವಿಶ್ವನಾಥ್ ಪಿಜಿ, ಪರಮೇಶ್ವರ ಬೆಹ್ರಾ, ವರುಣ್ ಸೋನಿ ಉಪಸ್ಥಿತರಿದ್ದರು.