ಬಂಟ್ವಾಳ ತಾಲೂಕಿನ ಪಿಎಫ್ಐ ಕಚೇರಿಗಳಿಗೆ ಬೀಗ ಹಾಕಿದ ಪೊಲೀಸರು
ಬಂಟ್ವಾಳ: ನಿಷೇಧಿತ ಸಂಘಟನೆ ಯಾದ ಪಿ.ಎಫ್.ಐ ಕಚೇರಿಗೆ ಎ.ಸಿ.ಮದನ್ ಮೋಹನ್ ನೇತ್ರತ್ವದಲ್ಲಿ ತಾಲೂಕಿನ ನಾಲ್ಕು ಕಚೇರಿ ಸೇರಿದಂತೆ ಮನೆಗೆ ಮುಂಜಾನೆ ವೇಳೆ ಬೀಗ ಹಾಕಿದ್ದಾರೆ.
ಜಿಲ್ಲಾಧಿಕಾರಿ ಗಳ ಆದೇಶದಂತೆ ಕಚೇರಿಗಳಿಗೆ ಬೀಗ ಹಾಕಿ, ಸಂಘಟನೆಯ ಬೋರ್ಡ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಫರಂಗಿಪೇಟೆ, ಕೆಳಗಿನಪೇಟೆ ಮಂಚಿಯಲ್ಲಿರುವ ಕಚೇರಿ ಹಾಗೂ ಪರ್ಲಿಯಾದಲ್ಲಿ ಹಂಝ ಎಂಬವರ ಮನೆಯನ್ನು ಕಚೇರಿ ಮಾಡಿದ ಈ ನಾಲ್ಕು ಕಡೆಗಳಿಗೆ ಏಕಕಾಲದಲ್ಲಿ ಪೋಲಿಸರ ತಂಡ ಬೀಗ ಹಾಕಿದೆ.
ತಾಲೂಕಿನಲ್ಲಿರುವ ಎಸ್.ಡಿ.ಪಿ.ಕಚೇರಿಯಲ್ಲಿ ಪಿ.ಎಫ್.ಐ.ಸಂಘಟನೆ ಗೆ ಸೇರಿದ ವ್ಯಕ್ತಿಗಳ ಚಲನ ವಲನಗಳ ಹಿನ್ನೆಲೆಯಲ್ಲಿ ಬೀಗ ಜಡಿಯಲು ಎ.ಸಿ.ಮದನ್ ಮೋಹನ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ಮಾಡಲಾಗಿತ್ತು.