ಸಿನಿಮಾ ಪ್ರಮೋಶನ್ಗೆ ತೆರಳಿದ ಮಲಯಾಳಂ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ
ಕೋಯಿಕ್ಕೋಡ್ : ಸಿನಿಮಾ ಪ್ರಚಾರಕ್ಕೆ ತೆರಳಿದ ಮಲಯಾಳಂ ನಟಿಯರ ಮೇಲೆ ಅಭಿಮಾನಿಯಿಂದ ಲೈಂಗಿಕ ದೌರ್ಜನ್ಯ ನಡೆದ ಘಟನೆ ಕೇರಳದ ಕೋಯಿಕ್ಕೋಡಿನಲ್ಲಿ ನಡೆದಿದೆ. ನಟಿಯರು ಸಿನಿಮಾದ ಪ್ರಮೋಶನ್ಗೆ ಕೋಯಿಕ್ಕೋಡ್ನ ಮಾಲ್ ಒಂದಕ್ಕೆ ತೆರಳಿದ್ದ ಸಂದರ್ಭ ಈ ಅಹಿತಕರ ಘಟನೆ ಸಂಭವಿಸಿದೆ.
ಸಿನಿಮಾ ಪ್ರಚಾರಕ್ಕೆ ತೆರಳಿದ ಮಲಯಾಳಂನ ಇಬ್ಬರು ನಟಿಯರಾದ ಸಾನಿಯಾ ಅಯ್ಯಪ್ಪನ್ ಮತ್ತು ಗ್ರೇಸ್ ಆ್ಯಂಟನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.
ಅಭಿಮಾನಿಯೋರ್ವ ನಟಿಯನ್ನು ಎಳೆದುಕೊಂಡು ಖಾಸಗಿ ಭಾಗಗಳನ್ನು ಮುಟ್ಟಿದ್ದಾನೆ. ಈ ಬಗ್ಗೆ ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಮುಟ್ಟಬಾರದ ಜಾಗಗಳಿಗೆ ಕೈ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆಟ್ಟ ಅನುಭವದ ಬಗ್ಗೆ ನಟಿಯರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬೇಸರ ಹೊರಹಾಕಿದ್ದಾರೆ. ‘ಅಭಿಮಾನಿ ಎಲ್ಲಿ ಮುಟ್ಟಿದ ಎಂದು ಹೇಳಲೂ ಅಸಹ್ಯವಾಗುತ್ತದೆ’ ಎಂದು ನಟಿ ಬೇಸರ ಹೊರಹಾಕಿದ್ದಾರೆ.
‘ಕೋಯಿಕ್ಕೋಡ್ ನಾನು ಅತಿಯಾಗಿ ಪ್ರೀತಿಸುವ ನಗರ. ಆದರೆ ರಾತ್ರಿ ಕಾರ್ಯಕ್ರಮ ಮುಗಿಸಿ ಬರುವಾಗ ಗುಂಪಿನಲ್ಲಿದ್ದ ವ್ಯಕ್ತಿಯೋರ್ವ ನನ್ನನ್ನು ಎಳೆದುಕೊಂಡ. ಎಲ್ಲಿ ಮುಟ್ಟಿದ ಎಂದು ಹೇಳಲು ಅಸಹ್ಯವಾಗುತ್ತದೆ.
ನಮ್ಮ ಸುತ್ತ ಇರುವ ವ್ಯಕ್ತಿಗಳು ಫ್ರಸ್ಟ್ರೇಟ್ ಆಗಿದ್ದಾರಾ? ನಾವು ಪ್ರಮೋಷನ್ಗಾಗಿ ಹಲವು ನಗರಗಳಿಗೆ ತೆರಳಿದ್ದೆವು.
ಆದರೆ, ಈ ರೀತಿಯ ಅನುಭವ ಆಗಿರಲಿಲ್ಲ. ನನ್ನ ಸಹ ಕಲಾವಿದೆಗೂ ಇದೇ ರೀತಿಯ ಅನುಭವ ಆಗಿದೆ. ಆಕ್ಷಣ ಏನು ಮಾಡಬೇಕು ಎನ್ನುವುದೇ ನನಗೆ ಗೊತ್ತಾಗಲಿಲ್ಲ’ ಎಂದು ನಟಿ ಬರೆದುಕೊಂಡಿದ್ದಾರೆ.
ಮತ್ತೊಂದು ನಟಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ತಮ್ಮ ಮೇಲೂ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಅವರು ಹೇಳಿದ್ದಾರೆ.
‘ನನಗೂ ಇದೇ ರೀತಿಯ ಅನುಭವ ಆಯಿತು. ಈ ರೀತಿಯ ಕೆಟ್ಟ ಅನುಭವ ಯಾರಿಗೂ ಆಗದಿರಲಿ ಎಂದು ನಾನು ಕೇಳಿಕೊಳ್ಳುತ್ತೇನೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು’ ಎಂದು ನಟಿ ಕೋರಿದ್ದಾರೆ.
ಸದ್ಯ ವಿಡಿಯೋ ವೈರಲ್ ಆಗಿದೆ. ಈ ರೀತಿ ಕೆಟ್ಟ ರೀತಿಯಲ್ಲಿ ನಡೆದುಕೊಂಡವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.