ದಲಿತರ ಗುಡಿಸಲುಗಳಿಗೆ ಬೆಂಕಿ:
ಹತ್ತು ಮಂದಿಗೆ ಗಾಯ, 20 ಗುಡಿಸಲುಗಳು ಬೆಂಕಿಗೆ ಆಹುತಿ
ಒರಿಸ್ಸಾ: ರಾಜ್ಯದ ಪುರಿಯ ಬ್ರಹ್ಮಗಿರಿ ಪೊಲೀಸ್ ವ್ಯಾಪ್ತಿಗೆ ಒಳಪಡುವ ಸತಪಾದದ ನಾಥಪುರ್ ಗ್ರಾಮದಲ್ಲಿ ಭಾನುವಾರ ಎರಡು ಬಣಗಳ ನಡುವೆ ಘರ್ಷಣೆ ನಡೆದಿದೆ.
ಪರಸ್ಪರ ಬಾಂಬುಗಳನ್ನು ಎಸೆದಿರುವ ಗುಂಪು ಘರ್ಷಣೆಯಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ, ಇಬ್ಬರು ಗಂಭೀರರಾಗಿದ್ದಾರೆ, 20 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ ಎಂದು ‘ಒರಿಸ್ಸಾ ಪೋಸ್ಟ್’ ವರದಿ ಮಾಡಿದೆ. ಘಟನೆ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳು ವೈರಲ್ ಆಗಿವೆ.
ಚಿಲಿಕಾದ ಕೃಷ್ಣಪ್ರಸಾದ್ ಬ್ಲಾಕ್‌ನ ಬ್ರಹ್ಮಪದ ಗ್ರಾಮದಿಂದ ಹೊರಹಾಕಲ್ಪಟ್ಟ ಸುಮಾರು 30 ದಲಿತ ಕುಟುಂಬಗಳು ಸುಮಾರು ಆರು ತಿಂಗಳಿಂದ ಸತಪದದ ನಾಥಪುರ್ ಗ್ರಾಮದ ಬಳಿ ಹುಲ್ಲುಗಾವಲು ಭೂಮಿಯಲ್ಲಿ ನೆಲೆಸಿದ್ದರು ಎಂದು ಮೂಲಗಳು ಹೇಳಿವೆ.
ಆದರೆ ಇದು ನಾಥಾಪುರ ಗ್ರಾಮಸ್ಥರಿಗೆ ಇಷ್ಟವಿರದ ಕಾರಣ ಎರಡು ಗುಂಪುಗಳ ನಡುವೆ ವೈಮನಸ್ಸು ಉಂಟಾಗಿತ್ತು. ದಲಿತರನ್ನು ತೆರವು ಮಾಡುವಂತೆ ನಾಥಾಪುರ ಗ್ರಾಮಸ್ಥರು ಸ್ಥಳೀಯ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಘಟನೆ ನಡೆದಿದೆ ಎಂದು ಸದ್ಯದ ಮೂಲಗಳು ತಿಳಿಸಿವೆ.





