ಬಂಟ್ವಾಳ ವಲಯ ಸುನ್ನೀ ಮಹಲ್ ಪೆಡರೇಶನ್ ನೂತನ ಸಮಿತಿ ರಚನೆ:
ಅಧ್ಯಕ್ಷರಾಗಿ ಇರ್ಷಾದ್ ದಾರಿಮಿ ಮಿತ್ತಬೈಲ್ ಆಯ್ಕೆ
ಬಿ ಸಿ ರೋಡ್ : ಸಮಸ್ತ ಉಲಮಾ ಒಕ್ಕೂಟದ ಆದೇಶದಂತೆ ಮೊಹಲ್ಲಾ ವ್ಯವಸ್ಥೆಗೆ ಕಾಯಕಲ್ಪ ನೀಡುವ ಗುರಿಯನ್ನು ಮುಂದಿಟ್ಟು ದಕ ಜಿಲ್ಲಾದ್ಯಂತ ಸುನ್ನಿ ಮಹಲ್ ಪೆಡರೇಶನ್ ಪುನರ್ರಚಿಸಲಾಗುತ್ತಿದೆ. ಇದರ ಭಾಗವಾಗಿ ಬಂಟ್ವಾಳ ವಲಯ ಸಮಿತಿಯನ್ನು ರೂಪೀಕರಿಸಲಾಯಿತು.
ಮಿತ್ತಬೈಲು ಇರ್ಷಾದ್ ದಾರಿಮಿಯವರ ಅಧ್ಯಕ್ಷತೆಯಲ್ಲಿ ಜಬ್ಬಾರ್ ಉಸ್ತಾದ್ ಗೃಹಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ವಾರ್ಷಿಕ ಮಹಾ ಸಭೆಯನ್ನು ಜಿಲ್ಲಾ ದಾರಿಮಿ ಒಕ್ಕೂಟದ ಅದ್ಯಕ್ಷ ಕೆಬಿ ಉಸ್ತಾದ್ ಉದ್ಘಾಟಿಸಿದರು.
ಅವರು ಮಾತನಾಡಿ ,ಧರ್ಮದ ಆಚಾರ ವಿಚಾರಗಳನ್ನು ಪಾಲಿಸುವಂತಾಗಲು ರಚನಾತ್ಮಕ ಕಾರ್ಯಗಳಿಗೆ ಪ್ರಾಮುಖ್ಯತೆ ನೀಡ ಬೇಕು ಎಂದರು.
ಮುಖ್ಯ ಭಾಷಣಗೈದ ಉಸ್ತಾದ್ ಎಸ್. ಬಿ ದಾರಿಮಿ ಉಪ್ಪಿನಂಗಡಿ ಮಾತನಾಡಿ ಮಸೀದಿಗಳನ್ನ ಕೇಂದ್ರೀಕರಿಸಿ ಜಾರಿಯಲ್ಲಿರುವ ಮೊಹಲ್ಲಾ ಪದ್ದತಿಯು ಪೂರ್ವಿಕರ ಅದ್ಭುತವಾದ ಪರಿಕಲ್ಪನೆಯಾಗಿದೆ.
ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಸ್ ಎಂ ಎಪ್ ನ ಪಾತ್ರ ಬಹಳ ಮುಖ್ಯವಾಗಿದೆ.
ಆದ್ದರಿಂದ ತಮ್ಮ ಮೊಹಲ್ಲಾಗಳನ್ನು ಎಸ್,ಎಮ್ ಎಪ್ ನೊಂದಿಗೆ ನೊಂದಾಯಿಸಲು ಪ್ರತೀ ಜಮಾತ್ ಸಮಿತಿ ಮುಂದಾಗ ಬೇಕೆಂದು ಕರೆಯಿತ್ತರು.
ಕೆಂ ಎಂ ಎ ಕೊಡುಂಗೈ ಸ್ವಾಗತಿಸಿದರು.
ಖಾದರ್ ಮಾಸ್ಟರ್ ಬಂಟ್ವಾಳ ವರದಿ ಮಂಡಿಸಿದರು.
ನೂತನ ಪಧಾದಿಕಾರಿಗಳಾಗಿ ಈ ಕೆಳಗಿನವರನ್ನು ಆರಿಸಲಾಯಿತು.
ಅಧ್ಯಕ್ಷರು : *ಇರ್ಶಾದ್ ದಾರಿಮಿ ಮಿತ್ತಬೈಲು,* ಉಪಾಧ್ಯಕ್ಷರು :
*ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ*
ಕೊಡಂಗಾಯಿ ,
*ಮುಹಮ್ಮದ್ ಹಾಜಿ ಸಾಗರ್* ಮಿತ್ತಬೈಲು,
*ಯೂಸುಫ್ ಬದ್ರಿಯಾ* ಕೊಳ್ತಮಜಲು,
*ಪಿ.ಟಿ.ಇಬ್ರಾಹಿಂ ಸಾಲೆತ್ತೂರು,*
ಪ್ರಧಾನ ಕಾರ್ಯದರ್ಶಿ : *ಅಬ್ದುಲ್ ಖಾದರ್ ಮಾಸ್ಟರ್ ಬಂಟ್ವಾಳ,*
ವರ್ಕಿಂಗ್ ಕಾರ್ಯದರ್ಶಿ : *ಮುಹಮ್ಮದ್ ರಫೀಕ್ ಹಾಜಿ ಕೊಡಾಜೆ*,
ಜೊತೆ ಕಾರ್ಯದರ್ಶಿ ಗಳು : *ಅಬ್ದುಲ್ ಲತೀಫ್ ಹಾಜಿ ಬೋಳಿಯಾರ್*
.*ಕೆ.ಎಂ.ಎ.ಕೊಡುಂಗಾಯಿ,* *ಶರೀಫ್ ಮೂಸಾ ಕುದ್ದುಪದವು*
. ಕೋಶಾಧಿಕಾರಿ :
*ಅಬ್ದುಲ್ ಹಕೀಂ ಹಾಜಿ ಪರ್ತಿಪ್ಪಾಡಿ*
ಹಾಗೂ 17 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.



