March 20, 2026

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ:
ಪುತ್ತೂರು ಟ್ರಸ್ಟ್ ನ ಅಧ್ಯಕ್ಷನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

0
image_editor_output_image1449748658-1636433436724.jpg

ಪುತ್ತೂರು: ಅಪ್ರಾಪ್ತ ಬಾಲಕಿಗೆ ಟ್ರಸ್ಟ್ ಅಧ್ಯಕ್ಷನೋರ್ವ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪಿಸಲಾಗಿದ್ದು, ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆರೋಪಿಯನ್ನು ಅಂಬೇಡ್ಕರ್ ಅಪತ್ಬಾಂಧವ ಟ್ರಸ್ಟ್ ನ ಅಧ್ಯಕ್ಷ ರಾಜು ಹೊಸ್ಮಠ ಎನ್ನಲಾಗಿದೆ.

ಮೂಲತಃ ಕೌಡಿಚ್ಚಾರ್‌ನವರಾದ ಸಂತ್ರಸ್ತೆಯ ಕುಟುಂಬ ಸದ್ಯ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. 2019ರಿಂದ ಆರೋಪಿ ರಾಜು ಹೊಸ್ಮಠಗೆ ಸಂತ್ರಸ್ತೆಯ ಪರಿಚಯವಿದೆ ಎನ್ನಲಾಗಿದೆ. ಆರೋಪಿ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಆತನ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಅಪ್ರಾಪ್ತ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: 39/2021 ಕಲಂ: 354(A) ಭಾ.ದಂ.ಸಂ ಮತ್ತು ಕಲಂ 8 ಪೋಕ್ಸ್ ಕಾಯ್ದೆ 2012 ಅಡಿಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!