March 20, 2026

ಸಾಮಾಜಿಕ ಜಾಲತಾಣದಲ್ಲಿ ಪೈಗಂಬರ್ ರವರ ಮೇಲೆ ಅವಹೇಳನಕಾರಿ ಸಂದೇಶ:
ಆರೋಪಿಗಳನ್ನು ಬಂಧಿಸಿ ತಕ್ಕ ಶಿಕ್ಷೆ ನೀಡುವಂತೆ ಆಗ್ರಹಿಸಿ ಸುಳ್ಯ ತಾಲ್ಲೂಕು ಮುಸ್ಲಿಂ ಒಕ್ಕೂಟದ ಸಭೆ

0
IMG-20211109-WA0002.jpg

ಸುಳ್ಯ: ಮುಸಲ್ಮಾನ ಬಾಂಧವರು ಅತ್ಯಂತ ಹೆಚ್ಚು ಪ್ರೀತಿಸುವ ಪ್ರವಾದಿಯವರ ಮೇಲೆ ನಿಂದನಾತ್ಮಕ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿದ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೊಲೀಸ್ ಇಲಾಖೆಗೆ ಮನವಿ ನೀಡಲು ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟ ನ. 8 ರಂದು ಸುಳ್ಯ ಅನ್ಸಾರಿಯ ಸಭಾಭವನದಲ್ಲಿ ಸಭೆ ಸೇರಿ ಒಕ್ಕೊರಳಿನ ತೀರ್ಮಾನ ಕೈಗೊಂಡಿದೆ.

ಕಳೆದ ಕೆಲವು ದಿನಗಳ ಹಿಂದೆ ಸುಳ್ಯದ ಐವರ್ನಾಡು ಮೂಲದ ವ್ಯಕ್ತಿಯೋರ್ವ ಫೇಸ್ಬುಕ್ ನಲ್ಲಿ ಮುಸಲ್ಮಾನ ಬಾಂಧವರು ಅತ್ಯಂತ ಹೆಚ್ಚು ಪ್ರೀತಿಸುವ ಪೈಗಂಬರ್ ಮೊಹಮ್ಮದ್ ರವರ ಮೇಲೆ ನಿಂದನಾತ್ಮಕ ಬರಹವನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸುಳ್ಯದ ಕೆಲವು ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮೇರೆಗೆ ಬೆಳ್ಳಾರೆ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದರು.

ಆದರೆ ಪೊಲೀಸರು ನಿಷ್ಪಕ್ಷ ತನಿಖೆ ನಡೆಸದೆ ಆತನ ಮೇಲೆ ಸರಳವಾದ ಪ್ರಕರಣ ದಾಖಲಿಸಿಕೊಂಡು, ಆತ ಮಾಡಿರುವ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಕೋಮ ಗಲಭೆಗೆ ಕಾರಣವಾಗಬಲ್ಲ ವಿಷಯವನ್ನು ಸೂಕ್ಷ್ಮವೆಂದು ಪರಿಗಣಿಸದೆ ಆತನಿಗೆ ಶಿಕ್ಷೆ ನೀಡದೇ ಇರುವುದು ಖಂಡನಾರ್ಹ ಎಂದು ಸಭೆಯಲ್ಲಿ ಚರ್ಚೆಗಳು ನಡೆದವು. ಆದರೆ ಈ ರೀತಿ ಸಮಾಜದಲ್ಲಿ ಒಂದು ಧರ್ಮದ, ಅಥವಾ ಧರ್ಮಗುರುಗಳ, ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಸಂದೇಶವನ್ನು ಬರೆದು ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ತನ್ನನ್ನು ತೊಡಗಿಸಿಕೊಂಡ ವ್ಯಕ್ತಿಯನ್ನು ಯಾವುದೇ ಶಿಕ್ಷೆ ನೀಡದೆ ಸುಲಭವಾಗಿ ಜಾಮೀನಿನಲ್ಲಿ ಹೊರಬಂದದ್ದು ಸರಿಯಲ್ಲ. ಆದ್ದರಿಂದ ಆ ವ್ಯಕ್ತಿಯನ್ನು ಬಂದಿಸಿ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಆತನಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿ ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟ ಮತ್ತೊಮ್ಮೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ಸಂಘಟನೆಯ ವತಿಯಿಂದ ಮನವಿ ಮಾಡಲು ಸಭೆಯಲ್ಲಿ ತೀರ್ಮಾನವನ್ನು ಕೈಗೊಂಡಿದ್ದಾರೆ.

ಸಭೆಯಲ್ಲಿ ಸಂಘಟನೆಯ ಸಂಚಾಲಕ ಇಕ್ಬಾಲ್ ಎಲಿಮಲೆ, ಸಹ ಸಂಚಾಲಕರಾದ ಶಾಫಿ ಬೆಳ್ಳಾರೆ, ಆರ್ ಕೆ ಮಹಮ್ಮದ್, ಕೆ ಎಸ್ ಉಮ್ಮರ್, ಹಾಗೂ ಸುಳ್ಯ ತಾಲೂಕಿನ ವಿವಿಧ ಜಮಾಅತಿನ ನೂರಕ್ಕೂ ಹೆಚ್ಚು ಸದಸ್ಯರುಗಳು ಉಪಸ್ಥಿತರಿದ್ದರು.
ಸಮಿತಿ ಸದಸ್ಯ ಕೆ ಬಿ ಮಜೀದ್ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!