March 24, 2026

ಸುರತ್ಕಲ್: ರಸ್ತೆ ಅಪಘಾತ ಮೂವರ ಸಾವು ಪ್ರಕರಣ: ಟ್ರಕ್ ಚಾಲಕನಿಗೆ ಜೈಲು ಶಿಕ್ಷೆ, ದಂಡ

0
image_editor_output_image-1328208489-1663826699797.jpg

ಮಂಗಳೂರು: ಸುರತ್ಕಲ್ ಬಳಿಯ ಪಡ್ರೆಯಲ್ಲಿ 2014ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರ ಸಾವಿಗೆ ಕಾರಣವಾದ ಟ್ರಕ್ ಚಾಲಕ ಪರಮೇಶ್ವರ್ ಎಂಬಾತನಿಗೆ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ಹಾಗೂ 7500 ರೂ.ಗಳ ದಂಡ ವಿಧಿಸಿದ್ದು, ದಂಡ ಕಟ್ಟದಿದ್ದರೆ ಮೂರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿದೆ.

ನ್ಯಾಯಮೂರ್ತಿ ಅಂಜಲಿ ಶರ್ಮಾ ಅವರು ತೀರ್ಪು ಪ್ರಕಟಿಸಿದರು. ಮೇ 12, 2014 ರಂದು ಟ್ರಕ್ ಚಾಲಕ ಮತ್ತು ಅಪರಾಧಿ ಪರಮೇಶ್ವರ್ ಮತ್ತು ಸವಿತಾ ಶ್ರೀನಾಥ ದಂಪತಿಯ ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಿತಾ ಶ್ರೀನಾಥ ದಂಪತಿಯ ಮಕ್ಕಳಾದ ನಿಶ್ಮಿತಾ, ಮನೀಶಾ ಮತ್ತು ಆಟೋ ರಿಕ್ಷಾ ಚಾಲಕ ಸುನೀಲ್ ಸಾವನ್ನಪ್ಪಿದ್ದರು.

ಅಂದಿನ ಸಿಐ ನಟರಾಜ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಗೀತಾ ರೈ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!