June 26, 2026

ಸುಳ್ಯ: ಯುವತಿಯೊಂದಿಗೆ ಅನುಚಿತ ವರ್ತನೆ:
ಕಲ್ಮಡ್ಕದ ಯುವಕನ ಬಂಧನ

0
images-1.jpeg

ಸುಳ್ಯ: ಇಲ್ಲಿನ ಮುರುಳ್ಯ ಗ್ರಾಮದ ಅಲೆಕ್ಕಾಡಿಯಲ್ಲಿ ಯುವಕನೋರ್ವ ಅನುಚಿತವಾಗಿ ವರ್ತಿಸಿದ್ದಾಗಿ ಯುವತಿಯೋರ್ವಳು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.

ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ನವಾಜ್(29) ಎಂಬಾತನನ್ನು ಬಂಧಿಸಿದ್ದಾರೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ.

ಅಲೆಕ್ಕಾಡಿಯಲ್ಲಿ ಬಾಡಿಗೆ ರೂಮ್ ಮಾಡಿಕೊಂಡಿದ್ದ ಕಲ್ಮಡ್ಕದ ಕಜೆ ನವಾಜ್(29) ಎಂಬಾತ ಅದೇ ಕಟ್ಟಡದಲ್ಲಿ ಬಾಡಿಗೆ ರೂಮ್ ಮಾಡಿಕೊಂಡು ತಾಯಿಯೊಂದಿಗೆ ವಾಸವಿರುವ ಯುವತಿಯ ಜೊತೆ ಕೈಸನ್ನೆ ಮಾಡುವುದು, ಬಟ್ಟೆ ಕಳಚುವುದು ಇತ್ಯಾದಿ ಅಸಭ್ಯ ವರ್ತನೆ ತೋರುತ್ತಿದ್ದ ಎಂದು ಯುವತಿ ದೂರು ನೀಡಿದ್ದಳು.

Leave a Reply

Your email address will not be published. Required fields are marked *

error: Content is protected !!