ಮಂಗಳೂರು: ಗೆಳೆಯರ ಜತೆ ಪಣಂಬೂರು ಬೀಚ್ ಗೆ ವಿಹಾರಕ್ಕೆ ಬಂದ ಬೆಂಗಳೂರು ಮೂಲದ ಯುವಕ ಸಮುದ್ರಪಾಲು
ಮಂಗಳೂರು: ವಿಹಾರಕ್ಕೆಂದು ಬಂದ ಯುವಕನೋರ್ವ ಸಮುದ್ರಪಾಲಾದ ಘಟನೆ ಪಣಂಬೂರು ಬೀಚ್ ನಲ್ಲಿ ಸೋಮವಾರ ನಡೆದಿದೆ.
ಸಮುದ್ರದ ಪಾಲಾದ ಯುವಕನನ್ನು ಬೆಂಗಳೂರು ಮೂಲದ ದಿನೇಶ್(20)ಎಂದು ಗುರುತಿಸಲಾಗಿದೆ. ದಿನೇಶ್ ತನ್ನ ಸ್ನೇಹಿತರಾದ ದೀಪಕ್, ಶ್ರೀನಿವಾಸ, ಪ್ರಶಾಂತ್, ಸುನೀಲ್, ಸುದೀಪ್, ಪ್ರಜ್ವಲ್, ಸೀನಾ ಎಂಬವರೊಂದಿಗೆ ನ.7ರಂದು ಬೆಂಗಳೂರಿನಿಂದ ಮಂಗಳೂರಿಗೆ ಬಂದು ಬೀಚ್ ಗೆ ತೆರಳಿದ್ದರು.
ಈ ಸಂದರ್ಭ ಸ್ನಾನಕ್ಕೆಂದು 8 ಮಂದಿ ಸಮುದ್ರಕ್ಕಿಳಿದಿದ್ದು, ಭಾರೀ ಅಲೆಯೊಂದಕ್ಕೆ ಸಿಲುಕಿ ದಿನೇಶ್ ಕೊಚ್ಚಿ ಹೋಗಿದ್ದಾರೆ. ಈ ವೇಳೆ ತಂಡದ ಇತರರು ಆತನ ರಕ್ಷಣೆಗೆ ಯತ್ನಿಸಿದರೂ ಆತ ಸಮುದ್ರಪಾಲಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ