August 12, 2026

ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೃತ್ಯು

0
image_editor_output_image-254592400-1663651865651.jpg

ಮಂಗಳೂರು: ಗರೋಡಿ ಬಳಿಯ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ತೀವ್ರ ಅನಾರೋಗ್ಯದಿಂದ ಮೃತಪಟ್ಟ ಘಟನೆ ಸೆ.19 ರಂದು ನಡೆದಿದೆ.

ಮೃತರನ್ನು ಶ್ರಿ ದುರ್ಗಾ ಸದನ್ ಸೌಜನ್ಯ ಲೇನ್ ಬಿಕರ್ನಕಟ್ಟೆ ನಿವಾಸಿಯಾದ ಹೆಚ್ ಪಿ ರಾಮಚಂದ್ರ ಮತ್ತು ಚಂದ್ರಾವತಿ ದಂಪತಿಗಳ ಪುತ್ರ , ಹೆಡ್ ಕಾನ್ಸ್ಟೇಬಲ್ ಜಯಂತ್ ಕುಮಾರ್ ಹೆಚ್.ಆರ್. ಎಂದು ಗುರುತಿಸಲಾಗಿದೆ.

1997ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಗೆ ನೇಮಕಾತಿ ಹೊಂದಿ ಸುಮಾರು 25 ವರ್ಷಗಳಲ್ಲಿ ದಕ್ಷಿಣ ಕನ್ನಡದ ಸುಳ್ಯ ಪೊಲೀಸ್ ಠಾಣೆ, ಮಂಗಳೂರು ನಗರದ ಉತ್ತರ & ದಕ್ಷಿಣ ಪೊಲೀಸ್ ಠಾಣೆ, ಉರ್ವ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಕಂಕನಾಡಿ ನಗರ ಪೊಲೀಸ್ ಠಾಣೆ ಯಲ್ಲಿ ಸುಮಾರು 04 ವರ್ಷ ಗಳಿಂದ ಪೋಲಿಸ್ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತ್ ಕುಮಾರ್ ಅವರನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಸೋಮವಾರ ಸಂಜೆ ನಿಧನ ಹೊಂದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!