August 12, 2026

ಕೆದಿಲ: ಗ್ರಾಮೀಣ ಕ್ರೀಡಾಕೂಟ – 2022-23 ಪ್ರಯುಕ್ತ ಮುಕ್ತ ಕಬಡ್ಡಿ ಹಾಗೂ ಮಹಿಳೆಯರ ಖೋ ಖೋ ಪಂದ್ಯಕೂಟ

0
IMG-20220919-WA0054

ಕೆದಿಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,
ತಾಲೂಕು ಪಂಚಾಯತ್ ಬಂಟ್ವಾಳ
ಕೆದಿಲ ಗ್ರಾಮ ಪಂಚಾಯತ್ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘ ಕೆದಿಲ ಇದರ ಸಹಯೋಗದಲ್ಲಿ  ಗ್ರಾಮೀಣ ಕ್ರೀಡಾಕೂಟ – 2022-23  ಪ್ರಯುಕ್ತ ಕೆದಿಲ ಗ್ರಾಮ ಪಂಚಾಯತ್ ಮಟ್ಟದ ಪುರುಷರ ಮುಕ್ತ ಕಬಡ್ಡಿ ಹಾಗೂ ಮಹಿಳೆಯರ ಖೋ ಖೋ ಪಂದ್ಯಕೂಟ  ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕಾಜೆ, ಕೆದಿಲ ಇಲ್ಲಿ ಜರಗಿತು. 

ಕೆದಿಲ ಪಂಚಾಯತ್ ಅಧ್ಯಕ್ಷೆ ಜಯಂತಿ ಧನಂಜಯ ಶೆಟ್ಟಿ, ಉಪಾಧ್ಯಕ್ಷ ಉಮೇಶ್ ಪೂಜಾರಿ ಮುರುವ, ಸದಸ್ಯರುಗಳಾದ  ಸುಲೈಮಾನ್ ಸರೋಲಿ, ಶ್ಯಾಮ ಪ್ರಸಾದ್ ಭಟ್, ಹರೀಶ್ ವಾಲ್ತಾಜೆ, ವನಿತಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಉಪಸ್ಥಿತರಿದ್ದರು.

ನಂತರ ಕ್ರೀಡಾಕೂಟದಂಗವಾಗಿ ಮಹಿಳೆಯರಿಗೆ ಖೋ ಖೋ ಪಂದ್ಯಾಟವು ಜರಗಿತು. ಪಂದ್ಯಕೂಟದಲ್ಲಿ ಕೃಷ್ಣ ಕರಿಮಜಲು  ಹಾಗೂ ಶ್ರೀದೇವಿ  ಗಾಂಧಿನಗರ ತಂಡಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಪುರುಷರ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ 8 ತಂಡಗಳು ಭಾಗವಹಿಸಿದ್ದು, ಫ್ರೆಂಡ್ಸ್ ಕೆದಿಲ ಹಾಗೂ ಇಂಡಿಯನ್ ಸ್ಪೋರ್ಟ್ಸ್ ಕ್ಲಬ್ ಪಾಟ್ರಕೋಡಿ ತಂಡಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ  ಪದ್ಮನಾಭ ಭಟ್, ಇಬ್ರಾಹಿಂ ಬಾತೀಷ ಬಾಯಬೆ,  ಮುರಳೀಧರ ಭಟ್ ಮುದ್ರಾಜೆ ಹಾಗೂ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತ್ ಸದಸ್ಯರುಗಳು ಭಾಗವಹಿಸಿ ಕ್ರೀಡಾಕೂಟದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಬಹುಮಾನ ವಿತರಣೆಯನ್ನು ನೆರವೇರಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಭುವನೇಂದ್ರ ಕುಮಾರ್ ಸ್ವಾಗತಿಸಿ ಕಾರ್ಯಕ್ರಮವನ್ನು  ನಿರೂಪಿಸಿದರು ಸಿಬಂದಿಗಳಾದ  ಲೋಹಿತ್ ಹಾಗೂ ಇತರರು ಸಹಕರಿಸಿದರು.  ಪಂದ್ಯಕೂಟದ ತೀರ್ಪುಗಾರರಾಗಿ ಅನ್ಸಾರ್, ಪ್ರವೀಣ್  ಗಾಂಧಿನಗರರವರು ಪಂದ್ಯಾವಳಿಯನ್ನು ನಡೆಸಿಕೊಟ್ಟರು. ಹೇಮಂತ್ ಕುಲಾಲ್ ಹಾಗೂ  ಲೂಯಿಸ್ ವಿನ್ಸೆಂಟ್ ಪಾಯ್ಸ್ ಸಹಕರಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!