August 12, 2026

ಲವ್ ಜಿಹಾದ್ ಅಲ್ಲ ನಾನೇ ಮುಸ್ಲಿಂ ಯುವಕನನ್ನು ಇಷ್ಟಪಟ್ಟು ಮದುವೆಯಾಗುತ್ತಿದ್ದೇನೆ: ಸಂಘಪರಿವಾರಕ್ಕೆ ಚೈತ್ರಾ ತಿರುಗೇಟು

0
image_editor_output_image1020430381-1663393663605.jpg

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರಿ ಸದ್ದು ಮಾಡಿದ್ದ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ನಾನೇ ಮುಸ್ಲಿಂ ಯುವಕನನ್ನು ಇಷ್ಟಪಟ್ಟು ಮದುವೆಯಾಗುತ್ತಿದ್ದು, ಅದು ನನ್ನ ಹಕ್ಕು, ಸ್ವಾತಂತ್ರ್ಯ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಮದುವೆಗೆ ಅಡ್ಡಿಪಡಿಸಿದವರಿಗೆ ಹಿಂದೂ ಯುವತಿ ಚೈತ್ರಾ ತಿರುಗೇಟು ಕೊಟ್ಟಿದ್ದಾಳೆ.

ನಾವು ಪ್ರೀತಿಸಿಯೇ ಮದುವೆ ಆಗುತ್ತಿದ್ದೇನೆ, ಮುಂದೆಯೂ ಚೆನ್ನಾಗಿರುತ್ತೇವೆ ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರಿಗೆ ಯುವತಿ ತಿರುಗೇಟು ನೀಡಿದ್ದಾಳೆ. ನನ್ನ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರ ವಿರುದ್ಧವೂ ಕಿಡಿಕಾರಿದ್ದಾಳೆ.

ಸೆಪ್ಟೆಂಬರ್ 14ರಂದು ಸಂಜೆ ಚಿಕ್ಕಮಗಳೂರು ನಗರದಲ್ಲಿ ಲವ್‌ ಜಿಹಾದ್‌ ಆರೋಪದ ಬಿಸಿಯ ತಾಪ ಏರಿತ್ತು. ಮುಸ್ಲಿಂ ಹುಡುಗ-ಹಿಂದೂ ಹುಡುಗಿ ಮದುವೆ ಆಗುವ ವಿಷಯ ತಿಳಿದು ಸಂಘಪರಿವಾರದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಪೊಲೀಸರೂ ಎಲ್ಲರನ್ನೂ ಠಾಣೆಗೆ ಕರೆದೊಯ್ದಿದ್ದರು. ನೈತಿಕ ಪೊಲೀಸ್ ಗಿರಿಯ ಆರೋಪದಡಿ ಸಂಘಪರಿವಾರದ ಮೇಲೆ ಪ್ರಕರಣ ದಾಖಲಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!