ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ ಬಂದಿಳಿದ 8 ಚಿರತೆಗಳು
ಗ್ವಾಲಿಯರ್(ಮಧ್ಯ ಪ್ರದೇಶ): ನೈರುತ್ಯ ಆಫ್ರಿಕಾದ ನಮೀಬಿಯಾ ದೇಶದಿಂದ ಏಳು ದಶಕಗಳ ನಂತರ ಭಾರತಕ್ಕೆ ಎಂಟು ಚಿರತೆಗಳು ಶನಿವಾರ ದೇಶಕ್ಕೆ ಬಂದಿಳಿದಿವೆ.
ನಿನ್ನೆ ರಾತ್ರಿ ನಮೀಬಿಯಾದಿಂದ ಮಾರ್ಪಡಿಸಿದ ಬೋಯಿಂಗ್ ವಿಮಾನದಲ್ಲಿ ಸುಮಾರು 10 ಗಂಟೆಗಳ ಪ್ರಯಾಣದ ಸಮಯದಲ್ಲಿ ವಿಶೇಷ ಮರದ ಪೆಟ್ಟಿಗೆಗಳಲ್ಲಿ ಚಿರತೆಗಳನ್ನು ಮಧ್ಯ ಪ್ರದೇಶದ ಗ್ವಾಲಿಯರ್ ಗೆ ಕರೆತರಲಾಯಿತು.
ವಿಮಾನವು ಗ್ವಾಲಿಯರ್ ವಾಯುನೆಲೆಯಲ್ಲಿ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಬಂದಿಳಿಯಿತು. ಅಲ್ಲಿಂದ ಚಿರತೆಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕೊಂಡೊಯ್ಯಲಾಗಿದೆ. ಅಲ್ಲಿ ತಮ್ಮ ಜನ್ಮದಿನವನ್ನು ಆಚರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆ 10.45 ಕ್ಕೆ ಉದ್ಯಾನದ ಕ್ವಾರಂಟೈನ್ ಆವರಣಗಳಲ್ಲಿ ಮೂರು ಚಿರತೆಗಳನ್ನು ಬಿಡುತ್ತಾರೆ.
ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಗ್ವಾಲಿಯರ್‌ನಿಂದ 165 ಕಿಮೀ ದೂರದಲ್ಲಿರುವ ಶಿಯೋಪುರ್ ಜಿಲ್ಲೆಯ ಕುನೊಗೆ ಚಿರತೆಗಳನ್ನು ಬಿಡಲಾಗುತ್ತಿದ್ದು, ಪ್ರಯಾಣವು ಸುಮಾರು 20-25 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.




