March 22, 2026

ಇಂದು ಜ್ಞಾನವಾಪಿ ಮಸೀದಿ ತೀರ್ಪು: 144 ಸೆಕ್ಷನ್ ಜಾರಿ

0
image_editor_output_image1888048301-1662955020379.jpg

ವಾರಣಾಸಿ: ಉತ್ತರಪ್ರದೇಶದ ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿ – ಶೃಂಗಾರ ಗೌರಿ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಇಂದು ಪ್ರಕಟವಾಗುವ ನಿರೀಕ್ಷೆಯಿದೆ ಅತ್ಯಂತ ಸೂಕ್ಷ್ಮವಾದ ಈ ಪ್ರಕರಣದ ವಿಚಾರಣೆ ನಡೆಸಿದ್ದ ಜಿಲ್ಲಾ ಕೋರ್ಟ್ ನ ನ್ಯಾಯಾಧೀಶರಾದ ಎ.ಕೆ ವಿಶ್ವೇಶ್ ಅವರು ಕಳೆದ ತಿಂಗಳು ತೀರ್ಪನ್ನು ಸೆ.12ಕ್ಕೆ ಕಾಯ್ದಿರಿಸಿದ್ದರು.

ತೀರ್ಪು ಹಿನ್ನಲೆಯಲ್ಲಿ ವಾರಣಾಸಿ ನಗರದಲ್ಲಿ ಪೊಲೀಸರಿಂದ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ವಾರಣಾಸಿ ನಗರದಲ್ಲಿ ಕಲಂ 144 (ಜನಸಂದಣಿ ನಿಷೇಧ) ಜಾರಿ ಮಾಡಲಾಗಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರಿಂದ ಪಥ ಸಂಚಲನ ಮತ್ತು ಗಸ್ತು ನಡೆಸಲಾಗಿದೆ. ಉಪಹಾರ ಗೃಹಗಳು, ಧರ್ಮ ಶಾಲೆಗಳು, ವಿಶ್ರಾಂತಿಗೃಹಗಳು ಇವುಗಳನ್ನು ಪರಿಶೀಲಿಸಲಾಗುತ್ತಿದ್ದು ಅವುಗಳ ಮೇಲೆ ಗಮನ ಇರಿಸಲಾಗಿದೆ.

ಜ್ಞಾನವಾಪಿ ಮತ್ತು ಶೃಂಗಾರ ಗೌರಿಯ ಪೂಜೆ ಮಾಡಲು ಹಿಂದೂಗಳಿಗೆ ಅನುಮತಿ ನೀಡಬೇಕು, ಎಂಬುದರ ಬಗ್ಗೆ ತೀರ್ಪು ನೀಡಲಾಗುವುದು, ಹಿಂದೂಗಳ ಪರವಾಗೊ 4 ಮಹಿಳೆಯರು ದಿವಾಣಿ ನ್ಯಾಯಾಲಯದಲ್ಲಿ ಈ ಬೇಡಿಕೆಯನ್ನು ಸಲ್ಲಿಸಿದ್ದರು.

ಇದರ ಬಗ್ಗೆ ನ್ಯಾಯಾಲಯವು ಜ್ಞಾನವಾಪಿಯ ಸಮೀಕ್ಷೆ ನಡೆಸಲು ಆದೇಶ ನೀಡಿದ ನಂತರ ಇದನ್ನು ಮಾಡಲಾಗಿತ್ತು. ಅದಕ್ಕೆ ಮುಸಲ್ಮಾನ ಪಕ್ಷದಿಂದ ಆಕ್ಷೇಪ ವ್ಯಕ್ತವಾದಾಗ ಅದನ್ನು ತಿರಸ್ಕರಿಸಲಾಗಿತ್ತು. ಅದರ ನಂತರ ಈ ಪ್ರಕರಣವು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಆದ ನಂತರ ನ್ಯಾಯಾಲಯವು ಈ ಪ್ರಕರಣವನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಸ್ತಾಂತರಿಸಲು ಆದೇಶಿಸಿತ್ತು.

Leave a Reply

Your email address will not be published. Required fields are marked *

error: Content is protected !!