ಬಂಟ್ವಾಳ: ಮೊಡಂಕಾಪು ಬಾಲ ಯೇಸು ದೇವಾಲಯದಲ್ಲಿ ತೆನೆ ಹಬ್ಬ ಆಚರಣೆ
ಬಂಟ್ವಾಳ: ಮೊಡಂಕಾಪು ಬಾಲ ಯೇಸು ದೇವಾಲಯದಲ್ಲಿ ತೆನೆ ಹಬ್ಬ ಆಚರಣೆ ಮಾಡಲಾಯಿತು. ಬಾಲ ಮರಿಯಮ್ಮನವರ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ, ಬಾಲ ಮಾರಿಯಮ್ಮನವರ ಪ್ರತಿಮೆಯ ಮೆರವಣಿಗೆಯು ಬೆಳಿಗ್ಗೆ ಕಾಯಾರ್ಮಾರ್ ನಿಂದ ಪ್ರಾರಂಭಗೊಂಡು ಆಮ್ಟಾಡಿ ಸೊಸಾಯ್ಟಿ, ನಲ್ಕೆಮಾರ್, ಏರಿಯಾ ಮಾರ್ಗವಾಗಿ ಮೊಡಂಕಾಪು ಬಾಲ ಯೇಸು ದೇವಾಲಯ ತಲುಪಿತು.
ತೆರೆದ ಆಂಗಣದಲ್ಲಿ ಮರಿಯಮ್ಮನವರ ಗ್ರೋಟ್ಟೋ ಮುಂಭಾಗದಲ್ಲಿ ಹೊಸ ತೆನೆ ಯನ್ನು ವಂದನೀಯ ಧರ್ಮಗುರುಗಳಾದ ಮೆಲ್ವಿನ್ ಲೋಬೊರವರಿಂದ ಆಶೀರ್ವಚನಗೊಂಡು, ಬಾಲ ಯೇಸು ದೇವಾಲಯದಲ್ಲಿ ಪ್ರಧಾನ ಧರ್ಮಗುರುಗಳಾದ ವಂದನೀಯ ವಲೇರಿಯನ್ ಡಿಸೋಜರವರಿಂದ ದಿವ್ಯ ಬಲಿಪೂಜೆ ಅರ್ಪಿಸಲಾಯಿತು.
ಸಹಾಯಕ ಧರ್ಮಗುರುಗಳಾದ ವಂದನೀಯ ರಾಹುಲ್ ಡೆಕ್ಸ್ಟರ್ ಡಿ ಸೋಜಾ ಹಾಗೂ ಅತಿಥಿ ಧರ್ಮಗುರುಗಳಾದ ವಂದನೀಯ ಎಲಿಯಾಸ್ ಪ್ರ್ಯಾಂಕ್ ಹಾಜರಿದ್ದರು.
ಈ ಶುಭ ಗಳಿಗೆಯಲ್ಲಿ ನಾಡಿನ ಸಮಸ್ತ ಜನರಿಗೆ ಆರೋಗ್ಯ, ಸುಖ ಹಾಗೂ ಸಮೃದ್ಧಿಯನ್ನು ಆ ಭಗವಂತನು ಕರುಣಿಸಲೆಂದು ಒಕ್ಕೊರಲಿನಿಂದ ಪ್ರಾರ್ಥಿಸಲಾಯಿತು.






