February 2, 2026

ಬಂಟ್ವಾಳ: ತೀವ್ರ ಜ್ವರದಿಂದ ಕಾಲೇಜ್ ವಿದ್ಯಾರ್ಥಿನಿ ಮೃತ್ಯು

0
image_editor_output_image565694321-1662563612757

ಬಂಟ್ವಾಳ : ತೀವ್ರ ಜ್ವರದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದಾಳೆ.
ಅಮ್ಟಾಡಿ ನಿವಾಸಿ ಲೋಕೇಶ್ ಅವರ ಪುತ್ರಿ ಕವಿತಾ ( 20) ಮೃತಪಟ್ಟ ವಿದ್ಯಾರ್ಥಿನಿ.
ಕವಿತಾ ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ನಿನ್ನೆ ಸೆ.6 ರಂದು ಮಂಗಳವಾರ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ತುಂಬೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಗಾಗಿ ಹೋದ ವೇಳೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಗಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕವಿತಾ ಅವರು ಇಂದು ಸೆ.7 ರಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ ಎಂದು ಮನೆಯವರು ತಿಳಿಸಿದ್ದಾರೆ.
ಕವಿತಾ ಸಿದ್ದಕಟ್ಟೆ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿಯಾಗಿದ್ದು, ಕಲಿಕೆಯಲ್ಲಿ ಮುಂದಿದ್ದಳು.
ಸೆ.12 ರಂದು ಪರೀಕ್ಷೆ ನಡೆಯಲಿದ್ಸು, ಇದರ ತಯಾರಿಯಲ್ಲಿದ್ದಳು .

Leave a Reply

Your email address will not be published. Required fields are marked *

error: Content is protected !!