February 3, 2026

ಕೇರಳದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಬಂಟ್ವಾಳದ ಯುವಕ ಮೃತ್ಯು

0
image_editor_output_image-659132421-1662559776496

ಬಂಟ್ವಾಳ: ಕೆಲಸ ಮಾಡುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಬಂಟ್ವಾಳ ಮೂಲದ ವ್ಯಕ್ತಿಯೋರ್ವರು ಕೇರಳದ ಕಂಪೆನಿಯೊದರಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಮರ್ತಾಜೆ ನಿವಾಸಿ ವಿದ್ಯಾದರ ಕುಲಾಲ್ ,,(35) ಮೃತಪಟ್ಟ ವ್ಯಕ್ತಿ.
ನಿತ್ಯಾನಂದ ಅವರು ಕೇರಳದ ಖಾಸಗಿ ಎಲೆಕ್ಟ್ರಾನಿಕ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಸೆ.5 ರಂದು ಸೋಮವಾರ ಕರ್ತವ್ಯ ದಲ್ಲಿರುವಾಗ ವಿದ್ಯುತ್ ಹರಿದು ಅವರು ಮೃತಪಟ್ಟ ಘಟನೆ ನಡೆದಿದೆ.

ಮೂಲತ: ಬೆಳ್ಳಾರೆ ನಿವಾಸಿ ಯಾಗಿದ್ದ ಇವರು ಇತ್ತೀಚೆಗೆ ಸಜೀಪ ಮುನ್ನೂರು ಗ್ರಾಮದ ಮರ್ತಾಜೆ ಎಂಬಲ್ಲಿ ಜಾಗ ಖರೀದಿ ಮಾಡಿ ಮನೆ ಕಟ್ಟಿದ್ದರು.
ಕಳೆದ ಒಂದು ವರ್ಷದ ಹಿಂದೆ ಇವರಿಗೆ ವಿವಾಹವಾಗಿ ದ್ದು, ಪತ್ನಿ ಮಂಗಳೂರಿನ ಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಉದ್ಯೋಗ ದಲ್ಲಿದ್ದಾರೆ.
ಪತ್ನಿ ತುಂಬು ಗರ್ಭಿಣಿ ಯಾಗಿದ್ದು, ಬರುವ ತಿಂಗಳು ಸೀಮಂತ ಕಾರ್ಯಕ್ರಮ ನಡೆಯಲಿತ್ತು , ಆದರೆ ವಿಧಿಯ ಕ್ರೂರ ಆಟಕ್ಕೆ ವಿದ್ಯಾಧರ ಕುಲಾಲ್ ಅಸುನೀಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!