March 24, 2026

ಪುತ್ತೂರಿನ ‘ಬಿಂದು ಜೀರಾ’ ಕಂಪನಿಯ ಮೇಲೆ ರಿಲಯನ್ಸ್ ಕಂಪೆನಿ ಕಣ್ಣು: ಮಾರಾಟ ಮಾಡಲ್ಲ ಎಂದ ಎಸ್.ಜಿ. ಕಾರ್ಪೊರೇಟ್ಸ್

0
image_editor_output_image1121184807-1662532810003.jpg

ಮಂಗಳೂರು: ದೇಶಾದ್ಯಂತ ಹೆಸರುವಾಸಿಯಾಗಿರುವ ‘ಬಿಂದು ಜೀರಾ’ ಕಂಪನಿಯನ್ನು ರಿಲಯನ್ಸ್ ಸಮೂಹಕ್ಕೆ ಮಾರಾಟ ಮಾಡುವ ಉದ್ದೇಶವಿಲ್ಲ ಎಂದು ಎಸ್.ಜಿ. ಕಾರ್ಪೊರೇಟ್ಸ್ ನ ಆಡಳಿತ ನಿರ್ದೇಶಕ ಸತ್ಯಶಂಕರ್ ಹೇಳಿದ್ದಾರೆ.

ಕ್ಯಾಂಪಾ ಕೋಲಾ ಖರೀದಿ ಬಳಿಕ ರಿಲಯನ್ಸ್ ಬಿಂದು ಸೇರಿದಂತೆ ಹಲವು ಬ್ರ್ಯಾಂಡ್ ಗಳನ್ನು ಖರೀದಿಸಲು ಮುಂದಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

ರಿಲಯನ್ಸ್ ಸಮೂಹ ಸೇರಿದಂತೆ ವಿಪ್ರೊ, ಕೋಕೋ ಕೋಲಾ ಸೇರಿದಂತೆ ಹಲವಾರು ಬಹುರಾಷ್ಟ್ರೀಯ ಕಂಪನಿಗಳು ಖರೀದಿಗೆ ಆಸಕ್ತಿ ತೋರಿಸಿದ್ದವು. ಆದರೆ ನಮಗೆ ಕಂಪನಿಯನ್ನು ಮಾರಾಟ ಮಾಡುವ ಉದ್ದೇಶ ಇಲ್ಲ. ಮುಂದಿನ ದಿನಗಳಲ್ಲಿ ಕಂಪನಿಯನ್ನು ಇನ್ನಷ್ಟು ಬೆಳೆಸುವ ಗುರಿ ಹಾಕಿಕೊಂಡಿದ್ದೇವೆ ಎಂದು ಸತ್ಯಶಂಕರ್ ತಿಳಿಸಿದ್ದಾರೆ.

ದಕ್ಷಿಣದ ಕನ್ನಡದ ಪ್ರತ್ತೂರಿನಲ್ಲಿ ಉತ್ಪಾದನಾ ಘಟಕ ಹೊಂದಿರುವ ಕಂಪನಿಯು50ಕ್ಕೂ ಅಧಿಕ ಆಹಾರ ಹಾಗೂ ಪಾನೀಯ ಉತ್ಪನ್ನಗಳು ಹೆಚ್ಚಿನ ಬೇಡಿಕೆಯನ್ನು ಹೊಂದಿವೆ.

Leave a Reply

Your email address will not be published. Required fields are marked *

error: Content is protected !!