March 24, 2026

ಹೊಂಡದಲ್ಲಿ ಈಜಲು ಹೋಗಿ ಬಾಲಕ ಸಾವು: ಬಾಲಕ ಬದುಕಿ ಬರಲು ಮೃತದೇಹವನ್ನು ಉಪ್ಪಿನಲ್ಲಿ ಹೂತಿಟ್ಟ ಗ್ರಾಮಸ್ಥರು

0
image_editor_output_image-1034571771-1662532384649.jpg

ಬಳ್ಳಾರಿ: ಹೊಂಡದಲ್ಲಿ ಈಜಲು ಹೋಗಿ ಬಾಲಕ ಸಾವನಪ್ಪಿದ್ದು, ಆದರೆ ಉಪ್ಪಿನಲ್ಲಿ ಶವವಿಟ್ಟರೇ ಬಾಲಕ ಬದುಕುಳಿದು ಬರುತ್ತಾನೆ ಎಂದು ಗ್ರಾಮಸ್ಥರು ಮೌಡ್ಯತೆ ಮೆರೆದಿರುವಂತಹ ಘಟನೆ ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ನಡೆದಿದೆ.

‌ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹ ಉಪ್ಪಿನ ರಾಶಿಯಲ್ಲಿ  ಇಟ್ಟರೇ ಬದುಕುತ್ತಾನೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿತ್ತು. ಅದರಂತೆ ಸಿರವಾರ ಗ್ರಾಮದ ಸುರೇಶ್(10) ಎನ್ನುವ ಬಾಲಕ ಸ್ನೇಹಿತರೊಂದಿಗೆ ಈಜಲು ಹೋಗಿ  ನೀರಿನ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಕೂಡಲೇ ಪೋಷಕರು ಹಾಗೂ ಗ್ರಾಮಸ್ಥರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕನ ಮೃತದೇಹವನ್ನು ಉಪ್ಪಿನ ರಾಶಿಯಲ್ಲಿಟ್ಟಿದ್ದಾರೆ.

ನಾಲ್ಕೈದು ಚೀಲದಲ್ಲಿ ಉಪ್ಪು ತಂದು ಮೃತ ದೇಹವನ್ನು ಉಪ್ಪಿನಲ್ಲಿಟ್ಟು ಜೀವ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡಿದ್ದಾರೆ. ನಾಲ್ಕು ತಾಸುಗಳ ಕಾಲ ನೋಡಿದ್ದಾರೆ. ಆದ್ರೆ, ಬಾಲಕನ ಬರಲಿಲ್ಲ, ಕೊನೆಗೆ ಪೋಷಕರು ಬಾಲಕನ ಅಂತ್ಯಸಂಸ್ಕಾರ ಮಾಡಿದ್ದಾರೆ.

ನೀರಿನಲ್ಲಿ ಮುಳುಗಿ ಸತ್ತವರನ್ನು ಎರಡು ಗಂಟೆಗಳ ಒಳಗೆ ಉಪ್ಪಿನಲ್ಲಿ ಮುಳುಗಿಸಿಟ್ಟರೇ, ಅವರು ಮತ್ತೆ ಬದುಕುತ್ತಾರೆ ಎನ್ನುವ ಪೋಸ್ಟ್ ನೋಡಿದ್ದ ಕೆಲ ಗ್ರಾಮಸ್ಥರು, ನೂರಕ್ಕೂ ಹೆಚ್ಚು ಕೆ.ಜಿ ಉಪ್ಪನ್ನು ತಂದು ಅದರಲ್ಲಿ ಮುಖವನ್ನಷ್ಟೆ ಕಾಣುವಂತೆ ಬಾಲಕನ ಶವವನ್ನು ಮುಚ್ಚಿಟ್ಟಿದ್ದಾರೆ. ಅದ್ರೇ,  ನಾಲ್ಕೈದು ಗಂಟೆಗಳ ಕಾಲ ಇಟ್ಟರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಬಾಲಕನ ಶವಸಂಸ್ಕಾರ ಮಾಡಿದ್ದೇವೆಂದು‌‌ ಎಂದು ಮೃತ ಬಾಲಕನ ತಂದೆ ತಿಪ್ಪೇಸ್ವಾಮಿ ರೆಡ್ಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!