5 ಸಾವಿರ ಕಾರು ಕಳವು ಆರೋಪ: ಭಾರತದ ಅತಿದೊಡ್ಡ ಕಾರು ಕಳ್ಳನೆಂಬ ಕುಖ್ಯಾತಿ ಪಡೆದ ಆರೋಪಿಯ ಬಂಧನ
ನವದೆಹಲಿ: ದೇಶಾದ್ಯಂತ 5 ಸಾವಿರ ಕಾರುಗಳನ್ನು ಕದ್ದ ಆರೋಪ ಹೊತ್ತಿರುವ “ಭಾರತದ ಅತಿದೊಡ್ಡ ಕಾರು ಕಳ್ಳ”ನೆಂಬ ಕುಖ್ಯಾತಿ ಪಡೆದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಅನಿಲ್ ಚೌಹಾಣ್ (52) ಬಂಧಿತ ಆರೋಪಿ. ಈತನ ವಿರುದ್ಧ 180 ಪ್ರಕರಣಗಳು ದಾಖಲಾಗಿವೆ. ಪೊಲೀಸರು ಆರು ದೇಶೀಯ ನಿರ್ಮಿತ ಪಿಸ್ತೂಲ್‌ಗಳು ಮತ್ತು ಏಳು ಜೀವಂತ ಮದ್ದುಗುಂಡು, ಒಂದು ಕದ್ದ ಬೈಕನ್ನು ಪೊಲೀಸರು ಆರೋಪಿಯಿಂದ ವಶ ಪಡಿಸಿಕೊಂಡಿದ್ದಾರೆ.





