ಸ್ಕೈಡೈವಿಂಗ್ ಅಭ್ಯಾಸದಲ್ಲಿ ನೆಲಕ್ಕೆ ಬಿದ್ದು ಖ್ಯಾತ ಟಿಕ್ ಟಾಕ್ ತಾರೆ ಸಾವು
ಕೆನಡಾ: ಇಲ್ಲಿನ ಖ್ಯಾತ ಟಿಕ್ ಟಾಕ್ ತಾರೆ ಹಾಗೂ ಮಾಡೆಲ್ ತಾನ್ಯಾ ಪರ್ದಾಜಿ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ.
ಸದ್ಯ ಅವರು ಸ್ಕೈಡೈವಿಂಗ್ ಕ್ಲಾಸಿಗೆ ಸೇರಿಕೊಂಡಿದ್ದು, ಸ್ಕೈಡೈವಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದಾಗ ಅನಾಹುತ ಸಂಭವಿಸಿದೆ. ಆಕಾಶದಿಂದ ನೇರವಾಗಿ ನೆಲಕ್ಕೆ ಬಿದ್ದು 21ರ ವಯಸ್ಸಿನ ತಾನ್ಯ ದುರಂತ ಅಂತ್ಯ ಕಂಡಿದ್ದಾರೆ.
ತಾನ್ಯಾ ಪರ್ದಾಜಿ ಒಬ್ಬರೇ ಸ್ಕೈಡೈವಿಂಗ್ ಅಭ್ಯಾಸ ಮಾಡುವಾಗ ತಡವಾಗಿ ಪ್ಯಾರಾಚೂಟ್ ಓಪನ್ ಮಾಡಿದ ಹಿನ್ನೆಲೆಯಲ್ಲಿ ಪ್ಯಾರಾಚೂಟ್ ಗೆ ಗಾಳಿ ತುಂಬಿಕೊಳ್ಳದೇ ಆಕಾಶದಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಆಗಸ್ಟ್ 27 ರಂದು ಕೆನಡಾದ ಒಂಟಾರಿಯೋದಲ್ಲಿ ಈ ದುರಂತ ನಡೆದಿದ್ದು, ಸ್ಕೈಡೈವಿಂಗ್ ತರಬೇತಿ ಸಂಸ್ಥೆಯ ಮೇಲೆ ದೂರು ದಾಖಲಾಗಿದೆ.





