August 12, 2026

ಮಂಗಳೂರಿನಲ್ಲಿ ನಡೆದ ಪ್ರಧಾನಿ ಕಾರ್ಯಕ್ರಮಕ್ಕೆ ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ

0
image_editor_output_image-710217956-1662366495867.jpg

ಬೆಳ್ಳಾರೆ: ಇಲ್ಲಿನ ಠಾಣಾ ವ್ಯಾಪ್ತಿಯ ಐವರ್ನಾಡಿನ ವ್ಯಕ್ತಿಯೊಬ್ಬರು ಮಂಗಳೂರಿನಲ್ಲಿ ನಡೆದ ಪ್ರಧಾನಿ ಕಾರ್ಯಕ್ರಮಕ್ಕೆ ತೆರಳಿ ನಾಪತ್ತೆಯಾಗಿ ನಾಲ್ಕು ದಿನದ ಬಳಿಕ ಪತ್ತೆಯಾಗಿದ್ದಾರೆ.

ಐವರ್ನಾಡು ಗ್ರಾಮದ ಸದಾಶಿವ ಪಾಲೆಪ್ಪಾಡಿ ಎಂಬವರು ಸೆ.2 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದರು.ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದೀಗ ಸೆ.೫ ರಂದು ಬೆಳ್ಳಾರೆಯಲ್ಲಿ ಪತ್ತೆಯಾಗಿದ್ದು ಠಾಣೆಗೆ ಹಾಜರಾಗಿ ಬಳಿಕ ಗ್ರಾಮ ಪಂಚಾಯತ್ ಸದಸ್ಯ ಯೋಗೀಶ ಕಲ್ಲಗದ್ದೆ ,ಸಿಬ್ಬಂದಿಗಾಳಾದ ಕುಮಾರ ಕಟ್ಟತ್ತಾರು ,ಪ್ರಜ್ವಲ್ ರವರೊಂದಿಗೆ ಮನೆಗೆ ತೆರಳಿದ್ದಾರೆಂದು ತಿಳಿದು ಬಂದಿದೆ. ಮಂಗಳೂರಿನಿಂದ ತನ್ನ ಸ್ನೇಹಿತನ ಮನೆಗೆ ಹೋಗಿರುವುದಾಗಿ ತಿಳಿಸಿದ್ದಾರೆನ್ನಲಾಗಿದೆ. ಈ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.

Leave a Reply

Your email address will not be published. Required fields are marked *

You may have missed

error: Content is protected !!