ಕೊರಟಗೆರೆ: ಸೇತುವೆ ನೀರಿನಲ್ಲಿ ಸಿಲುಕಿದ ಬಸ್
ತುಮಕೂರು: ಕೊರಟಗೆರೆ ತಾಲ್ಲೂಕಿನ ದಾಸಾಲುಕುಂಟೆ ಗ್ರಾಮದ ಸೇತುವೆ ಮೇಲೆ ನೀರು ಹರಿಯುತ್ತಿರುವುದನ್ನು ಲೆಕ್ಕಿಸದೆ ಬಸ್ ಸಂಚರಿಸಿದ್ದು, ನೀರಿನಲ್ಲಿ ಸಿಲುಕಿದ ಜನರನ್ನು ಸ್ಥಳೀಯರು ರಕ್ಷಿಸಿದರು.
ದಾಸಾಲುಕುಂಟೆ ಕೆರೆ ಕೋಡಿ ಬಿದ್ದಿದ್ದು, ಸೇತುವೆ ಮೇಲೆ ನೀರು ಹರಿಯುತ್ತಿದೆ. ತೋವಿನಕೆರೆ ತೊಟ್ಲುಕೆರೆ ಮಾರ್ಗ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ನೀರು ಹರಿಯುತ್ತಿರುವುದನ್ನು ಲೆಕ್ಕಿಸಿದೆ ಸಂಚರಿಸಿದ ಬಸ್ ಮಾರ್ಗಮಧ್ಯೆಯೇ ನಿಂತಿತ್ತು. ಬಸ್ ಮತ್ತು ಪ್ರಯಾಣಿಕರನ್ನು ಜೆಸಿಬಿ ಸಹಾಯದಿಂದ ಸ್ಥಳೀಯರು ಹೊರತೆಗೆದರು.





