ರೈಲ್ವೆ ಹಳಿ ಬಳಿ ರೀಲ್ಸ್ ಮಾಡುತ್ತಿದ್ದ ಯುವಕನಿಗೆ ರೈಲು ಢಿಕ್ಕಿ: ಯುವಕ ಆಸ್ಪತ್ರೆಗೆ ದಾಖಲು

ಹೈದರಾಬಾದ್ : ರೈಲ್ವೆ ಹಳಿ ಬಳಿ ರೀಲ್ಸ್ ಮಾಡಲು ಹೋಗಿ ಯುವಕನಿಗೆ ರೈಲು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿರುವ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಕಾಜಿಪೇಟ್‌ನಲ್ಲಿ ನಡೆದಿದೆ.
ಈಗಿನ ಯುವಕರು ಟಿಕ್ ಟಾಕ್, ರೀಲ್ಸ್ ಮಾಡುವುದರಲ್ಲೇ ಹೆಚ್ಚು ಸಮಯ ವ್ಯರ್ಥಮಾಡುತ್ತಿದ್ದಾರೆ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಗಳದ್ದೇ ಕಾರುಬಾರು ಹಾಗಾಗಿ ಒಂದಲ್ಲಾ ಒಂದು ರೀತಿಯಲ್ಲಿ ಯುವಕರು ತಮ್ಮ ಮೊಬೈಲ್ ಗಳಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದು ಜಾಯಮಾನವಾಗಿದೆ, ಅಲ್ಲದೆ ಈ ರೀತಿಯ ವಿಡಿಯೋ ಮಾಡಲು ಯುವಕರು ಯಾವ ರೀತಿಯ ಅಪಾಯ ಎದುರಿಸಲೂ ಸಿದ್ದ. ಅಂತದ್ದೇ ಒಂದು ಅಪಾಯವೊಂದನ್ನು ತೆಲಂಗಾಣದ ಯುವಕನೊಬ್ಬ ಎದುರುಹಾಕಿ ಈವಾಗ ಆಸ್ಪತ್ರೆಗೆ ದಾಖಲಾಗಿದ್ದಾನೆ.