ವಿಟ್ಲ; ಉಕ್ಕುಡ ಬದ್ರಿಯಾ ಜುಮಾ ಮಸೀದಿ: ದರ್ಸ್ ಪುನರಾರಂಭ,ಬೀಳ್ಕೊಡುಗೆ ಸಮಾರಂಭ.
ವಿಟ್ಲ ; ಉಕ್ಕುಡ ಬದ್ರಿಯಾ ಜುಮಾ ಮಸೀದಿ ಅಧೀನದ ಮುಹ್ಯಿಸ್ಸುನ್ನ ದರ್ಸ್ ನ ಪುನರಾರಂಭ ಹಾಗೂ ಉನ್ನತ ಧಾರ್ಮಿಕ ವ್ಯಾಸಂಗಕ್ಕಾಗಿ ಈಜಿಫ್ಟ್ ಗೆ ತೆರಳುವ ವಿದ್ಯಾರ್ಥಿಗೆ ಬೀಳ್ಕೊಡುವ ಸಮಾರಂಭ ಮಸೀದಿಯಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಬ್ಬಾಸ್ ಹಾಜಿ ಅವರು ನೆರವೇರಿಸಿದರು.
ನೇತೃತ್ವವನ್ನು ಸೈಯದ್ ಶಿಹಾಬುದ್ದೀನ್ ತಂಙಳ್ ಮದಕ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದರ್ಸ್ ಸಂಸ್ಕೃತಿ ಪ್ರವಾದಿ ಮುಹಮ್ಮದ್ ಮುಸ್ತಫಾ ( ಸ.ಅ) ರವರ ಕಾಲದಲ್ಲೇ ಇತ್ತು.ಧರ್ಮದ ತಳಹದಿಯೇ ಈ ದರ್ಸ್ ವ್ಯವಸ್ಥೆಯಾಗಿದೆ.ಈ ನಿಟ್ಟಿನಲ್ಲಿ ಮುತಅಲ್ಲಿಂ ಗಳಿಗೆ ಪೂರಕ ವಾತಾವರಣ ನಿರ್ಮಿಸಿಕೊಡುತ್ತಿರುವ ಜಮಾಅತ್ ಸದಸ್ಯರು ಅಭಿನಂದನಾರ್ಹರು ಎಂದು ಹೇಳಿದರು.
ಮುದರ್ರಿಸ್ ಹಾಫಿಳ್ ಅಹಮದ್ ಶರೀಫ್ ಸಖಾಫಿ ಉಸ್ತಾದ್ ದರ್ಸ್ ವ್ಯವಸ್ಥೆ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು.
ಇದೇ ಸಂದರ್ಭ ಉನ್ನತ ಶಿಕ್ಷಣಕ್ಕಾಗಿ ಈಜಿಫ್ಟ್ ಗೆ ತೆರಳುವ ವಿದ್ಯಾರ್ಥಿ ಮುಹ್ಸಿನ್ ಉಳ್ಳಾಲ ಇವರನ್ನು ಸನ್ಮಾನಿಸಲಾಯಿತು
ಮಸೀದಿ ಪ್ರದಾನ ಕಾರ್ಯದರ್ಶಿ ಶರೀಫ್ ತೈಬಾ , ಕೋಶಾಧಿಕಾರಿ ಅಬ್ದುಲ್ಲಾ ಕುಂಞಿ ,ಸ್ವಲಾತ್ ಸಮಿತಿ ಅಧ್ಯಕ್ಷ ಮುನೀರ್ ದರ್ಬೆ, ಕಾರ್ಯದರ್ಶಿ ಹನೀಫ್ ಟಿ.ಎಚ್.ಯಂ.ಎ , ಜಲಾಲಿಯ್ಯಾ ಸಮಿತಿ ಅಧ್ಯಕ್ಷ ಹೈದರ್ ಉಕ್ಕುಡ ,ಕಾರ್ಯದರ್ಶಿ ಇಕ್ಬಾಲ್ ಉಕ್ಕುಡ , ಡಿ.ಕೆ.ಅಬ್ದುಲ್ ಖಾದರ್ ,ಬಂಟ್ವಾಳ ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ. ,ಡಿ ‘ಗ್ರೂಪ್ ಅಧ್ಯಕ್ಷ ಶಾಕಿರ್ ಅಳಕೆಮಜಲು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ಉದ್ಯಮಿ ಉಬೈದ್ ವಿಟ್ಲ, ಮುಂತಾದವರು ಉಪಸ್ಥಿತರಿದ್ದರು





