December 15, 2025

ಕಾಪು: ಲಾಡ್ಜ್ ನಲ್ಲಿ ಮಾದಕ ವಸ್ತು ಸಹಿತ ಮೂವರು ಆರೋಪಿಗಳ ಬಂಧನ

0
image_editor_output_image-586608110-1745395735040.jpg

ಮಣಿಪಾಲ : ಲಾಡ್ಜ್ ಒಂದರಲ್ಲಿ ಮಾದಕ ವಸ್ತು ಸಹಿತ ಮೂವರನ್ನು ಪೊಲೀಸರು ಮಂಗಳವಾರ(ಎ22) ಬಂಧಿಸಿರುವ ಘಟನೆ ಮಣಿಪಾಲಸ 80 ಬಡಗಬೆಟ್ಟು ಗ್ರಾಮದ ದಶರಥ ನಗರದಲ್ಲಿ ನಡೆದಿದೆ.

ಕಾಪುವಿನ ಮಂಚಕಲ್ ಅಜರುದ್ದೀನ್, ಮಹಾರಾಷ್ಟ್ರದ ಪುಣೆಯ ರಾಜೇಶ್ ಪ್ರಕಾಶ್ ಜಾದವ್, ಮತ್ತು ಮಲ್ಪೆಯ ನಾಜೀಲ್ (ಆಶಿಪ್) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಮಾದಕವಸ್ತುವನ್ನು ತೆಗೆದುಕೊಳ್ಳಲು ಉಪಯೋಗಿಸುವ ಸಿರಿಂಜ್‌ಗಳನ್ನು ಹೊಂದಿದ ಬಗ್ಗೆ ಬಂದ ಮಾಹಿತಿ ಆಧರಿಸಿ ಮಣಿಪಾಲ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

40 ಸಾವಿರ ರೂ ಮೌಲ್ಯದ 13.70 ಗ್ರಾಂ ತೂಕದ MDMA, 10,500 ರೂ ಮೌಲ್ಯದ 225 ಗ್ರಾಂ ಗಾಂಜಾ, ಪ್ಲಾಸ್ಟಿಕ್ ಕವರ್ ಗಳು, 5 ಸಿರಿಂಜ್‌ಗಳು ಹಾಗೂ ಮೊಬೈಲ್ ಗಳು ವಶಪಡಿಸಿಕೊಳ್ಳಲಾಗಿದೆ.

ಈ ಘಟನೆ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!