ಕಲಿಕೆಯಲ್ಲಿ ತನ್ನ ಮಗನಿಗಿಂತಲೂ ಮುಂದಿದ್ದ ಇನ್ನೊಬ್ಬ ವಿದ್ಯಾರ್ಥಿಯನ್ನು ಕೊಂದ ತಾಯಿ

ಕಾರೈಕಲ್: 13 ವರ್ಷದ ಬಾಲಕನನ್ನು ಸಹಪಾಠಿಯ ತಾಯಿಯೇ ಕೊಲೆ ಮಾಡಿರುವ ಘಟನೆ ಕಾರೈಕಲ್ ನಲ್ಲಿ ನಡೆದಿದೆ.
ವಿದ್ಯಾರ್ಥಿ ಶಾಲೆಯಲ್ಲಿ ತನ್ನ ಮಗಳನ್ನು ಮೀರಿಸುವುದನ್ನು ಬಯಸದ ಕಾರಣ ಮಹಿಳೆ ಪಾನೀಯದಲ್ಲಿ ವಿಷ ಹಾಕಿ ಕುಡಿಸಿದ್ದಾಳೆ. ಇದರಿಂದ ತೀವ್ರ ಅಸ್ವತ್ಥಗೊಂಡಿದ್ದ ಬಾಲಕ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಆರೋಪಿಯನ್ನು 42 ವರ್ಷದ ಜೆ ಸಹಾಯರಾಣಿ ವಿಕ್ಟೋರಿಯಾ ಎಂದು ಗುರುತಿಸಲಾಗಿದೆ. ಇನ್ನು ಮಹಿಳೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಮೃತ ವಿದ್ಯಾರ್ಥಿ ಕಾರೈಕಲ್‌ನ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದು ತರಗತಿಯ ಟಾಪರ್ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದನು ಎಂದು ವರದಿಯಾಗಿದೆ. ಇನ್ನು ಆರೋಪಿ ಸಹಾಯರಾಣಿ ವಿಕ್ಟೋರಿಯಾ ಅವರ ಮಗಳು ಅದೇ ತರಗತಿಯಲ್ಲಿ ಓದುತ್ತಿದ್ದು ತನ್ನ ಮಗಳಿಗಿಂತ ಉತ್ತಮವಾಗಿ ಓದುತ್ತಿದ್ದ ಹುಡುಗನ ಬಗ್ಗೆ ಆಕೆ ಅಸಮಾಧಾನ ಹೊಂದಿದ್ದಳು.