March 13, 2026

ಮಿಸ್ಬಾಹುಸ್ಸುಆದಃ ಓರ್ಗನೈಝೇಷನ್ ಕರ್ನಾಟಕ ಸ್ಟುಡೆಂಟ್ಇದರ ನೂತನ ಪದಾಧಿಕಾರಿಗಳ ಆಯ್ಕೆ

0
image_editor_output_image730128012-1745415849372

ಕಾಸರಗೋಡು : ಇಲ್ಲಿನ ಜಾಮಿಅಃ ಸಅದಿಯ್ಯ ಅರಬಿಯ್ಯ ವಿಧ್ಯಾ ಕೇಂದ್ರದ ಕರ್ನಾಟಕ ವಿದ್ಯಾರ್ಥಿಗಳಿಂದ ರೂಪಿತವಾದ ವಿದ್ಯಾರ್ಥಿ ಸಂಘಟನೆ
ಮಿಸ್ಬಾಹುಸ್ಸುಆದಃ ಓರ್ಗನೈಝೇಷನ್ ಕರ್ನಾಟಕ ಸ್ಟುಡೆಂಟ್ (ಮೋಕ್ಸ್) ಇದರ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

   ಸಭೆಯ ಅಧ್ಯಕ್ಷತೆಯನ್ನು ಸಅದಿಯ್ಯಾ ಶರೀಅತ್ ಕಾಲೇಜ್ ಮುದರ್ರಿಸ್ ಶೈಖುನಾ ಕೆ.ಕೆ ಹುಸೈನ್ ಬಾಖವಿ ವಹಿಸಿದ್ದರು. ಸಯ್ಯದ್ ಇಸ್ಮಾಈಲ್ ಅಲ್ ಹಾದಿ ದು:ಹಾ ನೆರವೇರಿಸಿ,  ಕುಟ್ಟಶ್ಶೇರಿ ಉಸ್ತಾದ್ ಉದ್ಘಾಟಿಸಿದರು .

   ಹುಸೈಸ್ ಸಅದಿ ಕೆ.ಸಿ ರೋಡ್ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಿಕೊಟ್ಟು ಕ್ಯಾಂಪಸಲ್ಲಿ ಪಾಲಿಸಬೇಕಾದ ನೀತಿ ನಿಯಮಾವಳಿಗಳ ಕುರಿತು ಮಾಹಿತಿ ನೀಡಿದರು. ಲತೀಫ್ ಸಅದಿ ಉಸ್ತಾದ್, ಅಚ್ಚೂರು ಉಸ್ತಾದ್, ಚಿಯ್ಯೂರ್ ಉಸ್ತಾದ್, ಬಾಖವಿ ಉಸ್ತಾದ್, ಸೈಫುದ್ದೀನ್ ಸಅದಿ ಉಸ್ತಾದ್, ಅಝೀಝ್ ಸಅದಿ ಉಸ್ತಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

         ಮಿಸ್ಬಾಹುಸ್ಸುಆದಃ ಓರ್ಗನೈಝೇಷನ್ ಕರ್ನಾಟಕ ಸ್ಟುಡೆಂಟ್ (ಮೋಕ್ಸ್) ಇದರ  ನೂತನ ಅಧ್ಯಕ್ಷರನ್ನಾಗಿ ಮುಹಮ್ಮದ್ ಉನೈಸ್ ಪಾನೇಲ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಫ್ನಾಝ್ ಬೇಂಗಿಲ, ಹಣಕಾಸು ಕಾರ್ಯದರ್ಶಿಯಾಗಿ ಸ್ವಾದಿಕ್ ಕುಶಾಲನಗರ, ಉಪಾಧ್ಯಕ್ಷರನ್ನಾಗಿ ಸಯ್ಯದ್ ಶಮ್ಮಾಸ್, ಅನಸ್ ಮಾಣಿ, ಶಿಹಾಬುದ್ದೀನ್, ಜೊತೆ ಕಾರ್ಯದರ್ಶಿಯನ್ನಾಗಿ ಶಾಫಿ ಬಾಕಿಮಾರ್, ತ್ವಲ್ಹತ್ ನಾವೂರು, ಸುಹೈಲ್ ಖಾನ್ ಪಾಂಡವರ ಕಲ್ಲು, ಶರೀಫ್ ಎಮ್ಮೆಮಾಡು  ಅವರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!