November 9, 2026

ಪಡುಬಿದ್ರಿ: ಸೈಕಲ್‌ನಿಂದ ಬಿದ್ದು ಸವಾರ ಸಾವು

0
image_editor_output_image941373888-1794201368415

ಪಡುಬಿದ್ರಿ ನವೆಂಬರ್ 0ು8 : ಸೈಕಲ್‌ನಿಂದ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದ ಸವಾರನೊಬ್ಬ ಮೃತಪಟ್ಟ ಘಟನೆ ಶನಿವಾರ ಪಣಿಯೂರು ಪೇಟೆಯಲ್ಲಿ ಸಂಭವಿಸಿದೆ.

ಬೆಳಪು ದರ್ಖಾಸು ನಿವಾಸಿ ವಿಶ್ವನಾಥ (47) ಮೃತಪಟ್ಟ ಸೈಕಲ್ ಸವಾರ. ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಪಣಿಯೂರು ಪೇಟೆಯ ಬಳಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದರು. ಇದರಿಂದಾಗಿ ಅವರ ತಲೆಗೆ ತೀವ್ರ ಗಾಯವಾಗಿತ್ತು.

ತಕ್ಷಣ ಸ್ಥಳಕ್ಕೆ ಧಾವಿಸಿದ ಉಚ್ಚಿಲದ ಸಮಾಜ ಸೇವಕರಾದ ಜಲಾಲುದ್ದೀನ್ ಹಾಗೂ ಹಮೀದ್ ಅವರು ಸ್ಥಳೀಯರ ನೆರವಿನಿಂದ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರು.

ಆದರೆ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!