March 25, 2026

ಮದರಸಗಳು ಭಯೋತ್ಪಾದನೆ ಕಲಿಸುವ ಕೇಂದ್ರಗಳು ಎಂಬ ಹರಿಕೃಷ್ಣ ಬಂಟ್ವಾಳ ಹೇಳಿಕೆ ಖಂಡನೀಯ: ಕಿಯೋನಿಕ್ಸ್ ಅಧ್ಯಕ್ಷ ಹುದ್ದೆಯನ್ನು ಮತ್ತೆ ಪಡೆಯಲು ಹರಿಕೃಷ್ಣ ಬಂಟ್ವಾಳ ಕಷರತ್ತು: ಎಂ. ಎಸ್ ಮಹಮ್ಮದ್

0
IMG-20220903-WA0048

ವಿಟ್ಲ: ಹರಿಕೃಷ್ಣ ಬಂಟ್ವಾಳ ಅವರು ಧಾರ್ಮಿಕ ಕೇಂದ್ರದಲ್ಲಿ ಮದರಸಗಳು ಭಯೋತ್ಪಾದನೆ ಕಲಿಸುವ  ಕೇಂದ್ರಗಳು ಎಂಬ ಹೇಳಿಕೆ ನೀಡಿದ್ದು, ಖಂಡನೀಯವಾಗಿದ್ದು, ತಕ್ಷಣವೇ ಅವರು ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ಎಂಎಸ್ ಮಹಮ್ಮದ್ ಆಗ್ರಹಿಸಿದರು.‌

ಹರಿಕೃಷ್ಣ ಅವರೇ ಯಾವ ಮದರಸದಲ್ಲಿ ಭಯೋತ್ಪಾದನೆ ಕಲಿಸ್ತಾರೆ ಎಂಬುದರ ಬಗ್ಗೆ ಬಹಿರಂಗಪಡಿಸಿ,  ನಿಮ್ಮ ಇಂತಹ ಹೇಳಿಕೆಗಳು ಸತ್ಯವಾಗಿದ್ದರೆ ನನ್ನ ಸಾಮಾಜಿಕ ಮತ್ತು ರಾಜಕೀಯ ಜೀವನಕ್ಕೆ ನಿವೃತ್ತಿಯಾಗುತ್ತೇನೆ ಎಂದ ಅವರು  ಸುಮ್ನೆ ಪ್ರಚಾರಕ್ಕಾಗಿ ಕನ್ಯಾಡಿ ಎಂಬ ಪವಿತ್ರ ಕ್ಷೇತ್ರದಲ್ಲಿ ಈ ರೀತಿಯ ಹೇಳಿ ಸರಿಯಲ್ಲ. ನಿಮ್ಮ ಹೇಳಿಕೆಯಿಂದ ನೀವು ಭಾಗವಹಿಸಿದ ಕಾರ್ಯಕ್ರಮ ಅಪಪವಿತ್ರಗೊಳಿಸಲು ಯತ್ನಿಸಿದಂತಾಗಿದೆ. ಹರಿಕೃಷ್ಣ ಬಂಟ್ವಾಳ ಅವರು ಕಾಂಗ್ರೆಸ್ ನಲ್ಲಿರುವಾಗ ಬಿಜೆಪಿ ಬಗ್ಗೆ ಯಾವ ರೀತಿ ಮಾತನಾಡಿದ್ದೀರಿ, ಬಿಜೆಪಿ ನಾಯಕರನ್ನು ಅಪಹಸ್ಯ ಮಾಡಿದ್ದೀರಿ, ಎಲ್ಲವೂ ನಮಗೆ ಗೊತ್ತಿದೆ. ಈಗ ಬಿಜೆಪಿಗೆ ಹೋಗಿ ಅಲ್ಲಿಯ ನಾಯಕರನ್ನು ತೃಪ್ತಿಗೊಳಿಸುವ ಉದ್ದೇಶದಿಂದ  ಈಗಾಗಲೇ ಕಳೆದುಕೊಂಡ ಕಿಯೋನಿಕ್ಸ್ ಅಧ್ಯಕ್ಷ ಹುದ್ದೆಯನ್ನು ಮತ್ತೆ ಪಡೆದುಕೊಳ್ಳುವ ಉದ್ದೇಶದಿಂದ ಬಿಜೆಪಿ ನಾಯಕರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ.  ಇಂತಹ ಹೇಳಿಕೆಗಳನ್ನು ಕೊಡುವುದರ ಮೂಲಕ ಜಾತಿ ಧರ್ಮದ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ.  ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಸಮಾಜದಲ್ಲಿ ಸಾಮರಸ್ಯದ ಬೋಧನೆ ಮಾಡುವುದರ ಮೂಲಕ ನಾವೆಲ್ಲರೂ ಒಂದೇ ಭಾವನೆಯೊಂದಿಗೆ ಬದಕಲು ಕರೆ ನೀಡಿ, ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!