April 21, 2025

ಉಳ್ಳಾಲ: ಹಿಂದೂ ಯುವಸೇನೆಯ ಸಕ್ರಿಯ ಕಾರ್ಯಕರ್ತ ಆತ್ಮಹತ್ಯೆ: ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಯಂತ್

0

ಉಳ್ಳಾಲ: ಹಿಂದೂ ಯುವಸೇನೆಯ ಸಕ್ರಿಯ ಕಾರ್ಯಕರ್ತ ಕುಂಪಲ ಹನುಮಾನ್ ನಗರ ನಿವಾಸಿ ಜಯಂತ್ ಎಸ್. ಕುಂಪಲ (49) ಕೃಷ್ಣ ನಗರದ ಬಾಡಿಗೆ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಿಕ್ಷಾ ಚಾಲಕನಾಗಿದ್ದ ಅವರು ಕುಂಪಲ ಹನುಮಾನ್ ನಗರದಲ್ಲಿ ನೂತನ ಮನೆ ನಿರ್ಮಾಣದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಈ ನಡುವೆ ಆತ್ಮಹತ್ಯೆಗೈದಿರುವುದು ಸಂಶಯಕ್ಕೆಡೆ ಮಾಡಿದೆ.

ಕೂಳೂರಿನಲ್ಲಿ ನಿನ್ನೆ ನಡೆದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಯಂತ್ , ತನ್ನ ಸ್ಮಾರ್ಟ್ ಫೋನನ್ನು ಕಳೆದುಕೊಂಡಿದ್ದರು. ಈ ವಿಚಾರದಲ್ಲಿ ಇಂದು ಮಧ್ಯಾಹ್ನದವರೆಗೂ ದು:ಖ ತೋಡಿಕೊಂಡಿದ್ದರು. ಸಂಜೆ ಪತ್ನಿ ಮನೆಗೆ ಬಂದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಕುಂಪಲ ಹನುಮಾನ್ ನಗರ ಶ್ರೀವೀರಾಂಜನೇಯ ವ್ಯಾಯಾಮ ಶಾಲೆ ಸಕ್ರಿಯ ಸದಸ್ಯರಾಗಿದ್ದ ಇವರು, ಹಿಂದೂ ಯುವಸೇನೆ ಆರಂಭ ಸಂದರ್ಭದಲ್ಲಿ ಮುಖಂಡರಾಗಿ ಸಂಘಟನೆಯಲ್ಲಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!