March 13, 2026

ಮಂಗಳೂರು: ಯುವತಿ ನಾಪತ್ತೆ

0
image_editor_output_image1253151986-1745149488021.jpg

ಮಂಗಳೂರು: ಬಜಲ್‌ನ ಕಟ್ಟಪುಣಿಯಲ್ಲಿ ವಾಸವಾಗಿದ್ದ ಕೊಪ್ಪಳ ಮೂಲದ ಶಿವಪುತ್ರಪ್ಪ ಅವರ ಪುತ್ರಿ ಯಲ್ಲಮ್ಮ (೧೮) ಎಂಬ ಯುವತಿ ಏಪ್ರಿಲ್ 14 ರಿಂದ ನಾಪತ್ತೆಯಾಗಿದ್ದಾಳೆ.

ವರದಿಗಳ ಪ್ರಕಾರ, ಶಿವಪುತ್ರಪ್ಪ ಅವರು ಎಂದಿನಂತೆ ಬೆಳಿಗ್ಗೆ 7 ಗಂಟೆಗೆ ಉಳ್ಳಾಲದ ಆಜಾದ್ ನಗರದಲ್ಲಿ ದಿನಗೂಲಿ ಕೆಲಸಕ್ಕೆ ತೆರಳಿದ್ದು, ಅವರ ಪತ್ನಿಯೂ ಕೆಲಸಕ್ಕೆ ಹೋಗಿದ್ದರು. ಆ ಸಮಯದಲ್ಲಿ ಯಲ್ಲಮ್ಮ ಮನೆಯಲ್ಲಿ ಒಬ್ಬಂಟಿಯಾಗಿದ್ದಳು. ಆದರೆ, ಸಂಜೆ ಪೋಷಕರು ಹಿಂತಿರುಗಿದಾಗ, ಮನೆ ಹೊರಗಿನಿಂದ ಬೀಗ ಹಾಕಲಾಗಿತ್ತು ಮತ್ತು ಯಲ್ಲಮ್ಮ ನಾಪತ್ತೆಯಾಗಿದ್ದಳು.

ಬೀಗದ ಕೈ ಹತ್ತಿರದಲ್ಲೇ ಬಿದ್ದಿತ್ತು. ಜೊತೆಗೆ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಎಲ್ಲಾ ಸ್ಥಳಗಳಲ್ಲಿ ಆಕೆಗಾಗಿ ಯುಡುಕಾಟ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಆಕೆಯ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಕಂಕನಾಡಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!